ADVERTISEMENT

ಹಾಸನಾಂಬೆ ದೇಗುಲ ಹುಂಡಿ‌ ಕಾಣಿಕೆ ಎಣಿಕೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 8:49 IST
Last Updated 22 ಅಕ್ಟೋಬರ್ 2017, 8:49 IST
ಹಾಸನಾಂಬೆ ದೇಗುಲ ಹುಂಡಿ‌ ಕಾಣಿಕೆ ಎಣಿಕೆ
ಹಾಸನಾಂಬೆ ದೇಗುಲ ಹುಂಡಿ‌ ಕಾಣಿಕೆ ಎಣಿಕೆ   

ಹಾಸನ: ಹಾಸನಾಂಬೆ ಜಾತ್ರಾ ಮಹೋತ್ಸವ ಮುಕ್ತಾಯವಾಗಿದ್ದು, ಭಾನುವಾರ ಬೆಳಗ್ಗೆಯಿಂದ ಹುಂಡಿ‌ ಎಣಿಕೆ ಕಾರ್ಯ ಆರಂಭವಾಗಿದೆ.

ಬ್ಯಾಂಕ್ ಸಿಬ್ಬಂದಿ ಸೇರಿ ಒಟ್ಟು 50 ಮಂದಿ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅಧಿಕಾರಿಗಳ ಜತೆ  ನಾಲ್ಕು ಸಿ.ಸಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಚಿಕ್ಕದು, ದೊಡ್ಡದು ಸೇರಿ‌ ಒಟ್ಟು 16 ಹುಂಡಿಗಳ ಎಣಿಕೆ ನಡೆಯುತ್ತಿದೆ. ಇಂದು ಸಂಜೆವರೆಗೂ ಎಣಿಕೆ ನಡೆಯುವ ಸಾಧ್ಯತೆ ಇದೆ.

ಈ ಬಾರಿ ದಾಖಲೆ ಪ್ರಮಾಣದ ಆದಾಯ ಬರುವ ನಿರೀಕ್ಷೆ ಇದೆ. ಶೀಘ್ರ ದರ್ಶನಕ್ಕೆ ಒಂದು ಸಾವಿರ ರೂಪಾಯಿ ಟಿಕೆಟ್ ನಿಗದಿ ಮಾಡಿದ್ದು ಇದಕ್ಕೆ ಕಾರಣ. ಕಳೆದ‌ ವರ್ಷ ₹2.36 ಕೋಟಿ ಆದಾಯ ಕಾಣಿಕೆ ರೂಪದಲ್ಲಿ ಬಂದಿದ್ದು ದಾಖಲೆಯಾಗಿತ್ತು.

ADVERTISEMENT

ಈ ವರ್ಷ ಇದು ದುಪ್ಪಟ್ಟಾಗುವ ಸಾಧ್ಯತೆ ಎಂದು ಅಂದಾಜಿಸಲಾಗಿದೆ.

ನಿನ್ನೆಯಷ್ಟೆ ದೇಗುಲದ ಗರ್ಭಗುಡಿ ಬಾಗಿಲಿಗೆ ಬೀಗ ಹಾಕಲಾಗಿದೆ. ಮುಂದಿನ ವರ್ಷದ ಮತ್ತೆ ದರ್ಶನ ವೇಳೆ ಬಾಗಿಲು ತೆರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.