ADVERTISEMENT

‘ಪುರಾತನ ದೇಗುಲ ಜೀರ್ಣೋದ್ಧಾರಕ್ಕೆ ಕ್ರಮ’

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 4:12 IST
Last Updated 17 ಡಿಸೆಂಬರ್ 2013, 4:12 IST

ರಾಮನಾಥಪುರ: ಇಲ್ಲಿನ ಪ್ರಸಿದ್ಧ ರಾಮೇಶ್ವರ ದೇವಸ್ಥಾನದ ಬಲಭಾಗದಲ್ಲಿರುವ ಪವಿತ್ರ ಕಾವೇರಿ ನದಿ ದಂಡೆಯ ಮೇಲಿರುವ ವೀರಾಂಜನೇಯಸ್ವಾಮಿಗೆ ತಾಲ್ಲೂಕಿನ ದಂಡಾಧಿಕಾರಿಗಳಾದ ಜಗದೀಶ್ ಸೋಮವಾರ ಪುಷ್ಪಮಾಲೆ ಅರ್ಪಿಸುವ ಮೂಲಕ ಹನುಮ ಜಯಂತಿಗೆ ಚಾಲನೆ ನೀಡಿದರು.

  ನಂತರ ಶಿರಧನಹಳ್ಳಿ ಹತ್ತಿರ ಇರುವ ಪುರಾತನ ಕಾಲದ ಬನ್ನಿಮಂಟಪಕ್ಕೆ ಭೇಟಿ ನೀಡಿದರು. ಶಿಥಿಲಗೊಂಡಿರುವ ಮಂಟಪವನ್ನು ಜೀರ್ಣೋದ್ಧಾರ ಮಾಡಲು ಕ್ರಮ ಕೈಗೊಳ್ಳಲಾಗುವುದು ಹಾಗೂ ರಾಮನಾಥಪುರದಲ್ಲಿ ಇರುವ ಅನೇಕ ಪ್ರಾಚೀನ ದೇವಾಲಯಗಳು ಶಿಥಿಲಾವಸ್ಥೆಯಲ್ಲಿರುವುದು ಗಮನಕ್ಕೆ ಬಂದಿದ್ದು, ಮುಜರಾಯಿ ಮತ್ತು ಪುರಾತತ್ವ ಇಲಾಖೆಯ ಜಂಟಿ ಸಹಯೋಗದೊಂದಿಗೆ ದೇವಸ್ಥಾನಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕಂದಾಯ ಇಲಾಖೆ ಅಧಿಕಾರಿ ಸೋಮಣ್ಣ, ಗ್ರಾ.ಪಂ. ಸದಸ್ಯೆ ಲಲಿತಾ ಕುಮಾರ, ಧರ್ಮೇಶ, ಸುಬ್ರಹ್ಮಣ್ಯ, ಗಣೇಶ್, ನಾಗರಾಜ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.