ADVERTISEMENT

ಹಾಸನ: 1030 ಮಂದಿ ಆರೋಗ್ಯದಲ್ಲಿ ಚೇತರಿಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 14:08 IST
Last Updated 13 ಜೂನ್ 2021, 14:08 IST

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಭಾನುವಾರ 505 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಏಳುಜನರು ಮೃತಪಟ್ಟಿದ್ದಾರೆ.

ಒಟ್ಟು ಸೋಂಕಿತರ ಸಂಖ್ಯೆ 95,695ಕ್ಕೆ ಏರಿಕೆಯಾಗಿದ್ದು, 87,239 ಜನರ ಆರೋಗ್ಯದಲ್ಲಿ ಚೇತರಿಕೆಯಾಗಿದೆ. 1030 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

7,331 ಸಕ್ರಿಯ ಪ್ರಕರಣಗಳ ಪೈಕಿ 140 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕತ್ಸೆಪಡೆಯುತ್ತಿದ್ದಾರೆ. ಕೋವಿಡ್‌ ಕಾಯಿಲೆಯಿಂದ ಈವರೆಗೆ 1125 ಮಂದಿಮೃತಪಟ್ಟಿದ್ದಾರೆ.

ADVERTISEMENT

ಹೊಸದಾಗಿ ಆಲೂರು 26, ಅರಕಲಗೂಡು 63, ಅರಸೀಕೆರೆ 54, ಬೇಲೂರು 47, ಚನ್ನರಾಯಪಟ್ಟಣ 51, ಹಾಸನ 193, ಹೊಳೆನರಸೀಪುರ 27, ಸಕಲೇಶಪುರ37, ಇತರೆ ಜಿಲ್ಲೆಯ ಏಳು ಮಂದಿಗೆ ಸೋಂಕು ತಗುಲಿದೆ. ಅಲ್ಲದೇ ಚನ್ನರಾಯಪಟ್ಟಣ,ಹಾಸನದ ತಲಾ ಇಬ್ಬರು, ಹೊಳೆನರಸೀಪುರ, ಅರಸೀಕೆರೆ ಮತ್ತು ಆಲೂರು ತಾಲ್ಲೂಕಿನ ತಲಾ
ಒಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಡಾ.ಕೆ.ಎಂ.ಸತೀಶ್‌ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.