ADVERTISEMENT

₹ 10,703 ಮೌಲ್ಯದ ಮದ್ಯ ವಶ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 11:08 IST
Last Updated 29 ಏಪ್ರಿಲ್ 2018, 11:08 IST

ಹಾಸನ: ಅಕ್ರಮವಾಗಿ ಮದ್ಯ ಸಾಗಿಸುತಿದ್ದ ವಾಹನವನ್ನು ಮಾಲು ಸಮೇತ ಪೊಲೀಸರು ವಶಕ್ಕೆ ಪಡೆದಿದ್ದಾರೆ.ನಗರದ ಹೊರ ವಲಯದಲ್ಲಿರುವ ಬುಸ್ತೇನಹಳ್ಳಿ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ವೇಳೆ ಅದರಲ್ಲಿದ್ದ 25.78 ಲೀಟರ್ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.

ಒಂದು ಚೀಲ 8 ಪಿಎಂ ಹೆಸರಿನ ಟೆಟ್ರಾ ಪ್ಯಾಕ್, 90 ಎಂ.ಎಲ್.ನ ಬಾಟಲ್‌ಗಳು ಹಾಗೂ ಶ್ರವಣಬೆಳಗೊಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವನಂಜೇಗೌಡ ಅವರ ಹೆಸರು, ಭಾವಚಿತ್ರ ಮುದ್ರಿತವಾಗಿರುವ ಕರಪತ್ರಗಳು, ಕ್ಯಾಲೆಂಡರ್ ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಫ್ಲೈಯಿಂಗ್ ಸ್ಕ್ವಾಡ್ ಮುಖ್ಯಸ್ಥರು ತಿಳಿಸಿದ್ದಾರೆ.

ವಾಹನ ಚಾಲಕ ಹಾಗೂ ಸಹ ಪ್ರಯಾಣಿಕರು ವಾಹನ ಬಿಟ್ಟು ಪರಾರಿಯಾಗಿದ್ದು, ಬೊಲೆರೊ ವಾಹನದಲ್ಲಿದ್ದ ₹ 10,703 ಮೌಲ್ಯದ 25.78 ಲೀಟರ್ ಮದ್ಯ ಜಪ್ತಿ ಮಾಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.