ADVERTISEMENT

 ಹಾಸನ ಜಿಲ್ಲೆಯಲ್ಲಿ ಒಂದೇ ದಿನ 461 ಮಂದಿಗೆ ಕೋವಿಡ್‌

206 ಜನ ಬಿಡುಗಡೆ, 11 ಮಂದಿ ಸಾವು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2020, 15:50 IST
Last Updated 1 ಸೆಪ್ಟೆಂಬರ್ 2020, 15:50 IST

ಹಾಸನ: ಜಿಲ್ಲೆಯಲ್ಲಿ ಮಂಗಳವಾರ 461 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ
8486 ತಲುಪಿದೆ. ಇದು ಅತಿ ಹೆಚ್ಚು ಏಕದಿನದ ಏರಿಕೆಯಾಗಿದೆ.

ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೆ ಚೇತರಿಕೆ ಪ್ರಮಾಣವೂ ಹೆಚ್ಚಾಗುತ್ತಿದೆ. 206 ಮಂದಿ ಗುಣಮುಖರಾಗಿ
ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೂ 5538 ಜನರು ಚೇತರಿಸಿಕೊಂಡಿದ್ದಾರೆ. ಹನ್ನೊಂದು ಮಂದಿ ಸೋಂಕಿನಿಂದ ಸಾವೀಗೀಡಾಗಿದ್ದು, ಮೃತರ ಸಂಖ್ಯೆ 200 ತಲುಪಿದೆ.

ಜಿಲ್ಲೆಯಲ್ಲಿ 2748 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಹೋಂ ಐಸೋಲೇಷನ್‌ ಹಾಗೂ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುರ್ತು ನಿಗಾ ಘಟಕದಲ್ಲಿ 51 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ತೀವ್ರ ಜ್ವರ ಹಾಗೂ ಉಸಿರಾಟದಿಂದ ಬಳಲುತ್ತಿದ್ದ ಬೇಲೂರಿನ ವ್ಯಕ್ತಿ (50), ಚನ್ನರಾಯಪಟ್ಟಣದ ಯುವಕ (40),
ಆಲೂರು, ತುಮಕೂರಿನ 40 ವರ್ಷದ ಇಬ್ಬರು ಮಹಿಳೆಯರು, ಹಾಸನದ ಯುವತಿ (35), ವೃದ್ಧೆ (80) ಮತ್ತು
ಹೊಳೆನರಸೀಪುರದ ಪುರುಷ (53) ಚಿಕಿತ್ಸೆಗೆ ಸ್ಪಂದಿಸಲಿಲ್ಲ. ನಿಯಮದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‌ ತಿಳಿಸಿದರು.

ಹೊಸದಾಗಿ ಅರಸೀಕೆರೆ ತಾಲ್ಲೂಕಿನ 41, ಚನ್ನರಾಯಪಟ್ಟಣ 42, ಆಲೂರು 21, ಹಾಸನ 275, ಹೊಳೆನರಸೀಪುರ
18 , ಅರಕಲಗೂಡು 8, ಬೇಲೂರು 47 , ಸಕಲೇಶಪುರ 6 ಹಾಗೂ ಹೊರ ಜಿಲ್ಲೆಯ ಮೂವರಿಗೆ ಕೋವಿಡ್‌ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.