ADVERTISEMENT

ಕಲ್ಯಾಣಿಯಲ್ಲಿ ಮೊಳಗಿದ ಗೊಮ್ಮಟ ಸ್ತುತಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 9:53 IST
Last Updated 19 ಜನವರಿ 2018, 9:53 IST

ಶ್ರವಣಬೆಳಗೊಳ (ಹಾಸನ): ಗೊಮ್ಮಟನ ಮಹಾಮಸ್ತಕಾಭಿಷೇಕ ಅಂಗವಾಗಿ ಸುಮಾರು 3 ಸಾವಿರ ಜೈನ ಬಾಂಧವರು ಗುರುವಾರ ಬಾಹುಬಲಿ ಗೀತೆಯನ್ನು ಸಾಮೂಹಿಕವಾಗಿ ಹಾಡಿದರು.

ಚಿಕ್ಕದೇವರಾಜ ಒಡೆಯರ್‌ ಕಲ್ಯಾಣಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದವರು ವೈರಾಗ್ಯ ಮೂರ್ತಿ ಪ್ರಸಿದ್ಧ ಗೀತೆಯಾದ ‘ಬಾಹುಬಲಿ ಸ್ವಾಮಿ ಜಗಕ್ಕೆಲ್ಲ ಸ್ವಾಮಿ’ ಮತ್ತು ನೇಮಿಚಂದ್ರ ಸಿದ್ಧಾಂತ ಚಕ್ರವರ್ತಿ ರಚಿಸಿದ ‘ವಿಸಟ್ಟ ಕಂದೊಟ್ಟ ದಲಾಣು ಯಾರಂ‘ ಎಂಬ ಗೊಮ್ಮಟ ಸ್ತುತಿ ಮೊಳಗಿಸಿದರು. ಸಾಂಗ್ಲಿಯ ಕುಬೇರ್‌ ಚೌಗಲೆ ತಂಡ ಸಂಗೀತ ನೀಡಿತು.

ಮಹಿಳೆಯರು ಕೆಂಪು ಸೀರೆ ಹಾಗೂ ಪುರುಷರು ಶ್ವೇತವಸ್ತ್ರಧಾರಿಗಳಾಗಿದ್ದು ವಿಶೇಷವಾಗಿತ್ತು. ಉದ್ಘಾಟನಾ ಸ್ಥಳದಲ್ಲಿ ಬಾಹುಬಲಿ ಹಾಗೂ ಗುಳ್ಳುಕಾಯಜ್ಜಿ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.