ADVERTISEMENT

ಕುಡಿಯುವ ನೀರಿಗೆ ಇಲ್ಲ ಬರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2018, 10:39 IST
Last Updated 22 ಫೆಬ್ರುವರಿ 2018, 10:39 IST

ಶ್ರವಣಬೆಳಗೊಳ: ಮಹೋತ್ಸವದ ಸಂದರ್ಭದಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ನೋಡಿಕೊಳ್ಳಲಾಗಿದೆ. ಇದಿಕ್ಕಾಗಿ ಅಂದಾಜು ₹ 45 ಲಕ್ಷ ವೆಚ್ಚದಲ್ಲಿ 5 ಲಕ್ಷ ಲೀಟರ್‌ ನೀರು ಸಂಗ್ರಹ ಸಾಮರ್ಥ್ಯದ ಜಲಸಂಗ್ರಹಾಗಾರವನ್ನು ವಿಂಧ್ಯಗಿರಿ ಹಿಂಭಾಗದಲ್ಲಿ ನಿರ್ಮಿಸಲಾಗಿದೆ. ಬೆಟ್ಟವೂ ಸೇರಿ ಎರಡು ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗಿದೆ.

ಬೆಟ್ಟದ ತಪ್ಪಲಿನಲ್ಲಿ ಕರ್ನಾಟಕನೀರು ಸರಬರಾಜು, ಒಳಚರಂಡಿ ಮಂಡಳಿ ವತಿಯಿಂದ ನಿರ್ಮಿಸಿರುವ ಈ ಜಲಸಂಗ್ರಹಗಾರದಿಂದ ನಾಗಯ್ಯನಕೊಪ್ಪಲು ಹಾಗೂ ಕುಂಬಾರ ಕೊಪ್ಪಲುಗ್ರಾಮಕ್ಕೂ ಕುಡಿಯುವ ನೀರು ಒದಗಿಸುತ್ತಿದೆ.

ಪಂಪ್‌ ಹೌಸ್‌ ನಿರ್ಮಿಸಲಾಗಿದ್ದು, ಎರಡು ಮೋಟರ್‌, ಜನರೇಟರ್‌ ಸವಲತ್ತು ಕಲ್ಪಿಸಲಾಗಿದೆ. ಇದರ ಪಕ್ಕದಲ್ಲಿ ಹಳೆಯ ಟ್ಯಾಂಕ್‌ ಇದ್ದು, ಅಗತ್ಯವಿರುವ ಸಂದರ್ಭದಲ್ಲಿ ಅದರಿಂದ ನೀರು ಉಪಯೋಗಿಸಿಕೊಳ್ಳಬಹುದು.

ADVERTISEMENT

ಹೇಮಾವತಿ ಹೊಳೆಯಿಂದ ರಾಚೇನಹಳ್ಳಿಯಲ್ಲಿ ನೀರನ್ನು ಸಂಸ್ಕರಿಸಿ, ಅಲ್ಲಿಂದ ಜಲಸಂಗ್ರಹಗಾರಕ್ಕೆ ಸರಬರಾಜು ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.