ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಧರಣಿ

ವೇತನ ಸಹಿತ ವೈದ್ಯಕೀಯ ರಜೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 14:13 IST
Last Updated 12 ಜುಲೈ 2021, 14:13 IST
ಹಾಸನದ ಕೆ.ಆರ್‌.ಪುರಂ ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಧರಣಿ ನಡೆಸಿದರು
ಹಾಸನದ ಕೆ.ಆರ್‌.ಪುರಂ ನಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರು ಅಂಗನವಾಡಿ ಕಾರ್ಯಕರ್ತೆಯರು ಧರಣಿ ನಡೆಸಿದರು   

ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರ ಸಂಘದಿಂದ ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಎದುರುಸೋಮವಾರ ಧರಣಿ ನಡೆಸಲಾಯಿತು.

ಕೋವಿಡ್ ಎರಡನೇ ಅಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನುಸಮುದಾಯ ಜಾಗೃತಿ, ಸಮೀಕ್ಷೆಗಳು ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳ ಕರ್ತವ್ಯಗಳಿಗೆನಿಯೋಜಿಸಲಾಗಿದೆ. ಆದರೆ, ಅವಶ್ಯಕ ರಜೆ ನಿರಾಕರಿಸಲಾಗುತ್ತಿದೆ ಮತ್ತು ದಿನಕ್ಕೆ 16 ತಾಸುಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ನೂರಾರು ಕಾರ್ಯಕರ್ತೆಯರು ಹಾಗೂ ಕುಟುಂಬದವರು ಕೋವಿಡ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ ಅಪಾಯ ಭತ್ಯೆ, ಆಸ್ಪತ್ರೆ ವೆಚ್ಚದ ಪಾವತಿ ಅಥವಾ ಪ್ರಾಣಹಾನಿಪರಿಹಾರ ನೀಡುತ್ತಿಲ್ಲ ಎಂದರು.

ADVERTISEMENT

ಮಿನಿ - ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಪ್ರಮಾಣದ ಅಂಗನವಾಡಿ ಕೇಂದ್ರಗಳನ್ನಾಗಿಪರಿವರ್ತಿಸಿ ಸಹಾಯಕಿಯರನ್ನು ನೇಮಿಸಬೇಕು. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸಮಾಡುವ ಅಂಗನವಾಡಿ ಕಾರ್ಯಕರ್ತೆಯರಿಗೂ ಸಮಾನ ವೇತನ ಮತ್ತು ಸವಲತ್ತು ನೀಡಬೇಕುಎಂದು ಆಗ್ರಹಿಸಿದರು.

ವೇತನ ಸಹಿತ ವೈದ್ಯಕೀಯ ರಜೆ, ಮೇಲ್ವಿಚಾರಕರ ಹುದ್ದೆಗೆ ವಯಸ್ಸಿನ ಮಿತಿಯಿಲ್ಲದೇ ಬಡ್ತಿ,ಸಹಾಯಕಿ, ಕಾರ್ಯಕರ್ತೆ ಹುದ್ದೆಗೆ ವಯಸ್ಸಿನ ಮಿತಿಯಿಲ್ಲದ ಬಡ್ತಿ, ಬೇಸಿಗೆ ಮತ್ತು ಚಳಿಗಾಲದರಜೆಗಳು, 10 ವಾರ್ಷಿಕ ಇನ್ ಕ್ರೀಮೆಂಟ್, ಸಹಾಯಕಿ ಮತ್ತು ಮಿನಿ - ಅಂಗನವಾಡಿಕಾರ್ಯಕರ್ತರ ಇನ್‍ಕ್ರೀಮೆಂಟ್ ಇತ್ಯಾದಿಗಳನ್ನೂ ಒಳಗೊಂಡ ಏಕರೂಪದ ಸೇವಾಷರತ್ತುಗಳನ್ನು ದೇಶದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅನ್ವಯಿಸುವುದನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪಾ,ಕಾರ್ಯದರ್ಶಿ ಟಿ.ಎಚ್. ಜಯಂತಿ, ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಅರವಿಂದ್, ಎಚ್.ಆರ್. ನವೀನ್ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.