ADVERTISEMENT

ತಿರುಪತಿ ಬಳಿ ಅಪಘಾತ: ಹಾಸನದ ಸಬ್ಬನಹಳ್ಳಿಯ ಒಂದೇ ಕುಟುಂಬದ ಮೂವರು ಸಾವು

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2025, 14:00 IST
Last Updated 29 ಏಪ್ರಿಲ್ 2025, 14:00 IST
ಹಿರೀಸಾವೆ ಸಬ್ಬನಹಳ್ಳಿ ಗ್ರಾಮದ ರಜಿನಿ, ಸಹನಾ, ಲೇಖನಾ ತಿರುಪತಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟವರು.
ಹಿರೀಸಾವೆ ಸಬ್ಬನಹಳ್ಳಿ ಗ್ರಾಮದ ರಜಿನಿ, ಸಹನಾ, ಲೇಖನಾ ತಿರುಪತಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟವರು.   

ಹಿರೀಸಾವೆ: ತಿರುಪತಿಯಲ್ಲಿ ಸೋಮವಾರ ಸಂಭವಿಸಿದ ಅಪಘಾತದಲ್ಲಿ ಐವರು ಮೃತಪಟ್ಟಿದ್ದು, ಅವರಲ್ಲಿ ಹೋಬಳಿಯ ಸಬ್ಬನಹಳ್ಳಿಯ ಒಂದೇ ಕುಟುಂಬದ ಮೂವರು ಸೇರಿದ್ದಾರೆ.

ಗ್ರಾಮದ ಗೀತಮ್ಮ ಅವರ ಪುತ್ರ ರಜಿನಿ (36), ಸೊಸೆ ಸಹನಾ (32) ಹಾಗೂ ಮೊಮ್ಮಗ ಲೇಖನ (12) ಹಾಗೂ ರಜಿನಿಯವರ ಅತ್ತೆ ತುರುವೇಕೆರೆ ಮೂಲದ ವಿಜಯಮ್ಮ ಮತ್ತು ಕಾರಿನ ಚಾಲಕ ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ಎರ್ಟಿಗ ಕಾರಿನಲ್ಲಿ ತಿರುಪತಿಗೆ ಹೋಗಿ ಬರುವಾಗ ಕಂಟೈನರ್ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದಿದೆ. ಗೀತಮ್ಮ ಗಾಯಗೊಂಡಿದ್ದು, ತಿರುಪತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಮಂಗಳವಾರ ಸಂಜೆ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆದಿದೆ. ಬುಧವಾರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಂಜು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.