ADVERTISEMENT

ಪಕ್ಷ ಸಂಘಟನೆಗೆ ಕಾರ್ಯಕರ್ತರು ಶ್ರಮಿಸಿ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌ ಕರೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 3:05 IST
Last Updated 21 ನವೆಂಬರ್ 2020, 3:05 IST
ಹಾಸನ ನಗರದಲ್ಲಿ ನಡೆದ ಬಿಜೆಪಿ ನಗರ ಮಂಡಲ ಪ್ರಶಿಕ್ಷಣ ಶಿಬಿರದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌ ಮಾತನಾಡಿದರು
ಹಾಸನ ನಗರದಲ್ಲಿ ನಡೆದ ಬಿಜೆಪಿ ನಗರ ಮಂಡಲ ಪ್ರಶಿಕ್ಷಣ ಶಿಬಿರದಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌ ಮಾತನಾಡಿದರು   

ಹಾಸನ: ‘ಪಕ್ಷದ ಜತೆಗೆ ಸದೃಢ ದೇಶವನ್ನು ಕಟ್ಟುವ ಕನಸನ್ನು ಬಿಜೆಪಿ ಕಂಡಿದ್ದು, ಅದರ ಸಾಕಾರಕ್ಕೆ ಪ್ರತಿ ಕಾರ್ಯಕರ್ತರು ಶಕ್ತಿಮೀರಿ ಶ್ರಮಿಸಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಕೆ. ಸುರೇಶ್ ಸಲಹೆ
ನೀಡಿದರು.

ನಗರದ ಶ್ರೀರಾಮ ಮಂದಿರದಲ್ಲಿ ಶುಕ್ರವಾರ ನಡೆದ ಬಿಜೆಪಿ ನಗರ ಮಂಡಲ ಪ್ರಶಿಕ್ಷಣ ಹಾಗೂ ಹತ್ತು ಅಂಶಗಳ ವಿಷಯ ಚರ್ಚೆ ಸಭೆ ಉದ್ಘಾಟಿಸಿ ಮಾತನಾಡಿದರು.

‘ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಈ ತತ್ವ ನಿಷ್ಠೆಯೇದೇಶದಾದ್ಯಂತ ಬಿಜೆಪಿ ಗೆಲುವಿಗೆ ಸಹಕಾರಿಯಾಗಿದೆ. ಪ್ರತಿ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು’ ಎಂದರು.

ADVERTISEMENT

‘2014ರ ಲೋಕಸಭೆ ಚುನಾವಣೆಗೆ ಮೊದಲು ದೇಶದಲ್ಲಿ ಬಿಜೆಪಿ ಸ್ಥಿತಿ ಹೇಗಿತ್ತು ಹಾಗೂ ಈಗ ಯಾವ ಸ್ಥಾನದಲ್ಲಿದ್ದೇವೆ ಎಂಬುದರ ವಿಮರ್ಶೆ ನಡೆಯಬೇಕು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ವಿಶ್ವ ಗುರುವಾಗುವತ್ತ ದಾಪುಗಾಲಿಡುತ್ತಿದೆ’ ಎಂದು ಹೇಳಿದರು.

ನಗರ ಮಂಡಲ ಅಧ್ಯಕ್ಷ ಎಸ್.ಕೆ. ವೇಣುಗೋಪಾಲ್ ಮಾತನಾಡಿ, ‘ಪ್ರಶಿಕ್ಷಣ ವರ್ಗವು ಎಲ್ಲ ಕಾರ್ಯಕರ್ತರು ಒಂದೆಡೆ ಸೇರುವ ಸುಸಂದರ್ಭವಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಶಕ್ತಿಯುತವಾಗಿದ್ದು, ಯಾವುದೇ ಕ್ಷೇತ್ರದ ಚುನಾವಣೆ ನಡೆದರೂ ಹಾಸನದ ಕಾರ್ಯಕರ್ತರು ಅಲ್ಲಿರುತ್ತಾರೆ’ ಎಂದರು.

ಬಿಜೆಪಿ ಮುಖಂಡ ನವಿಲೆ ಅಣ್ಣಪ್ಪ, ಮೈಸೂರು ವಿಭಾಗ ಮುಖಂಡ ಕುಮಾರಸ್ವಾಮಿ, ಪದ್ಮನಾಭ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.