ADVERTISEMENT

ಹಾಸನ | ತಾಂತ್ರಿಕತೆ ಬೆಳೆದಂತೆ ಎಐ ಅಗತ್ಯ ಹೆಚ್ಚಳ: ಆರ್.ಟಿ. ದ್ಯಾವೇಗೌಡ

ಉಪನ್ಯಾಸಕರು, ತರಬೇತುದಾರರ ಕಾರ್ಯಾಗಾರದಲ್ಲಿ ಆರ್.ಟಿ. ದ್ಯಾವೇಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:44 IST
Last Updated 11 ನವೆಂಬರ್ 2025, 1:44 IST
ಹಾಸನದ ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಸೋಮವಾರ ಸಂಸ್ಥೆಯ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್‌ ಉದ್ಘಾಟಿಸಿದರು 
ಹಾಸನದ ಮಲೆನಾಡು ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಸೋಮವಾರ ಸಂಸ್ಥೆಯ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್‌ ಉದ್ಘಾಟಿಸಿದರು     

ಹಾಸನ: ಕಲಿಕಾ ನಿರ್ವಹಣೆ ವ್ಯವಸ್ಥೆಯಲ್ಲಿ ಅತ್ಯುತ್ತಮ ಸಂಶೋಧನೆ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಉದಯೋನ್ಮುಖ ಪಾತ್ರ ವಹಿಸುತ್ತದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್‌.ಟಿ. ದ್ಯಾವೇಗೌಡ ಹೇಳಿದರು.

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ವಿಭಾಗದಿಂದ ಕೃತಕ ಬುದ್ಧಿಮತ್ತೆ ಜನರೇಟೀವ್ ಪರಿಚಯ ಕುರಿತಾಗಿ ರಾಜ್ಯ, ಅಂತರ ರಾಜ್ಯದ ಎಂಜಿನಿಯರಿಂಗ್ ಉಪನ್ಯಾಸಕರು ಹಾಗೂ ತರಬೇತುದಾರರಿಗೆ ಸೋಮವಾರ ಆರಂಭವಾದ ಆರು ದಿನಗಳ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜ್ಞಾನ– ತಂತ್ರಜ್ಞಾನ ಬೆಳೆದಂತೆ ನಮಗೆ ಹೊಸ ಸವಾಲುಗಳು, ವಿಷಯಗಳು, ತಾಂತ್ರಿಕ ಜ್ಞಾನ, ತಾಂತ್ರಿಕತೆ, ಪಾಯೋಗಿಕ ವಿಧಾನಗಳ ಅಧ್ಯಯನದ ಅವಶ್ಯಕತೆ ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಕಂಪ್ಯೂಟರ್, ಕೃತಕ ಬುದ್ಧಿಮತ್ತೆಗಳು ಜ್ಞಾನಾರ್ಜನೆ ಹಾಗೂ ವೇಗದ ಕೆಲಸ ಕಾರ್ಯಗಳನ್ನು ಮಾಡಲು ಸಹಕಾರಿಯಾಗಿವೆ ಎಂದು ಹೇಳಿದರು.

ADVERTISEMENT

ಕೃತಕ ಬುದ್ಧಿಮತ್ತೆಯ ಅಗತ್ಯತೆ ಹೆಚ್ಚಾದಂತೆ ಅಧ್ಯಾಪಕರು ಮತ್ತು ಸಂಶೋಧಕರಿಗೆ ತರಬೇತಿ ಅಗತ್ಯವಿದೆ. ನಮ್ಮ ಕಾಲೇಜಿನಲ್ಲಿ ಕೃತಕ ಬುದ್ಧಿಮತ್ತೆ ಎಂಜಿನಿಯರಿಂಗ್ ಕೋರ್ಸ್‌ ಅನ್ನು ಕಳೆದ ವರ್ಷದಿಂದ ಪ್ರಾರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಂಪ್ಯೂಟರ್ ಕೋರ್ಸ್‌ನಲ್ಲಿ 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ ಎಂದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ಉದ್ಘಾಟಿಸಿದರು. ಮಲೆನಾಡು ಹಿಪ್ಪೋ ಶಾಲೆಯ ಉಪಾಧ್ಯಕ್ಷ ಬಿ.ಆರ್. ರಾಜಶೇಖರ್, ಎವಿಕೆ ಪಿಯುಸಿ ಕಾಲೇಜು ಉಪಾಧ್ಯಕ್ಷ ನಾಗರಾಜ್ ಜೈನ್, ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಸುರೇಶ್, ಶಾಂತಿಗ್ರಾಮ ಶಂಕರ್, ಕಾರ್ಯಕ್ರಮದ ಆಯೋಜಕ ಡಾ.ಬಿ.ರಮೇಶ್, ಕಂಪ್ಯೂಟರ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ.ಜೆ. ಚಂದ್ರಿಕಾ, ಸಂಪನ್ಮೂಲ ವ್ಯಕ್ತಿಗಳಾದ ಇನ್ಫೊಸಿಸ್ ಪ್ರೋಗ್ರಾಮ್ ವ್ಯವಸ್ಥಾಪಕ ಕಿರಣ್ ಎನ್.ಜಿ., ಟಿಸಿಎಸ್ ವರ್ಕ್ ಫೋರ್ಸ್ ವ್ಯವಸ್ಥಾಪಕ ಡಾ ಶ್ರೀನಿವಾಸ್ ಕಂದೂರಿ, ಮೇಘಾ ವಿಜಯ್, ಡಾ.ಗುರುರಾಜ್ ಎಚ್.ಎಲ್., ಡಾ. ಗೋಪಾಲ್ ಕೃಷ್ಣ ಎಂ.ಟಿ, ಮಲೆನಾಡು ಎಂಜಿನಿಯರ್ ಕಾಲೇಜು ಸಹ ಪ್ರಾಧ್ಯಾಪಕರಾದ ಡಾ.ಕಾವ್ಯಶ್ರೀ ಎಂ.ಎನ್., ಕೆ.ಎಸ್.ಕೀರ್ತಿ, ಮಧು ಇದ್ದರು.

ನ.15 ರವರೆಗೆ ನಡೆಯಲಿರುವ ತರಬೇತಿ ಕಾರ್ಯಾಗಾರ | ರಾಜ್ಯ, ಹೊರ ರಾಜ್ಯಗಳ 200ಕ್ಕೂ ಅಧಿಕ ಪ್ರತಿನಿಧಿಗಳು ಭಾಗಿ | ವಿವಿಧ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಮಂಡನೆ
ಕೃತಕ ಬುದ್ಧಿಮತ್ತೆ ಎಂಜಿನಿಯರಿಂಗ್‌ನ ಮೂಲಭೂತ ಅಂಶ ಪ್ರಯೋಜನ ನಾವು ಬಳಸುವ ವಿಧಾನ ತಿಳಿಯಬೇಕಾಗಿದೆ. ಜನರೇಟಿವ್ ಎಐನ ಅರಿವು ನಮಗಿರಬೇಕು
ಪುಷ್ಪಲತಾ ದೇವೇಂದ್ರ ಇನ್ಫೊಸಿಸ್‌ ಮೈಸೂರಿನ ಹಿರಿಯ ವ್ಯವಸ್ಥಾಪಕಿ
ಕೃತಕ ಬುದ್ಧಿಮತ್ತೆಯ ಅರಿವು ಮತ್ತು ಪರಿಣಾಮಕಾರಿ ಪ್ರಾಯೋಗಿಕ ವಿಧಾನ ಅನುಸರಿಸಲು ನುರಿತ ತಾಂತ್ರಿಕ ಸಂಶೋಧಕರಿಂದ ಇಂಥ ತರಬೇತಿ ಅಗತ್ಯವಿದೆ
ಡಾ. ಅಮರೇಂದ್ರ ಮಲೆನಾಡು ಎಂಜಿನಿಯರಿಂಗ್‌ ಕಾಲೇಜು ಪ್ರಾಂಶುಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.