ADVERTISEMENT

ಶಿಕ್ಷಕರಿಗೆ ಅಕ್ಷರ ರತ್ನ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 4:40 IST
Last Updated 12 ಸೆಪ್ಟೆಂಬರ್ 2025, 4:40 IST
ಹಾಸನದ ಅಕ್ಷರ ಅಕಾಡೆಮಿಯಲ್ಲಿ ವಿವಿಧ ಶಾಲೆಗಳ ಶಿಕ್ಷಕರಿಗೆ ಅಕ್ಷರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಾಸನದ ಅಕ್ಷರ ಅಕಾಡೆಮಿಯಲ್ಲಿ ವಿವಿಧ ಶಾಲೆಗಳ ಶಿಕ್ಷಕರಿಗೆ ಅಕ್ಷರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಹಾಸನ: ಶಿಕ್ಷಕರ ದಿನವನ್ನು ಸಮಾಜದ ಪ್ರತಿಯೊಬ್ಬರು ಸಂಭ್ರಮಿಸಿ, ಆಚರಣೆ ಮಾಡುತ್ತಿದ್ದ ಕಾಲ ಕಣ್ಮರೆಯಾಗಿದ್ದು, ಇಂದು ಶಿಕ್ಷಕರೇ ಶಿಕ್ಷಕರ ದಿನವನ್ನು ಆಚರಣೆ ಮಾಡಿಕೊಳ್ಳುವ ದುಸ್ಥಿತಿಗೆ ಬಂದಿದೆ ಎಂದು ಅಕ್ಷರ ಅಕಾಡೆಮಿ ಮುಖ್ಯಸ್ಥ ಟೈಮ್ಸ್ ಗಂಗಾಧರ್ ಬಿ.ಕೆ. ಅಭಿಪ್ರಾಯಪಟ್ಟರು.

ನಗರದ ರಿಂಗ್ ರಸ್ತೆಯಲ್ಲಿರುವ ಅಕ್ಷರ ಅಕಾಡೆಮಿಯಲ್ಲಿ ಶುಕ್ರವಾರ ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಅಕ್ಷರ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಸ್ಥಾನ ನೀಡಲಾಗಿದೆ. ಶಿಕ್ಷಕರ ದಿನವನ್ನು ಇಡೀ ಗ್ರಾಮವೇ ಆಚರಣೆ ಮಾಡುತಿತ್ತು. ಆದರೇ ಕಾಲ ಬದಲಾದಂತೆ ಶಿಕ್ಷಕರಿಗೆ ನೀಡುವ ಸ್ಥಾನಮಾನ ಹಾಗೂ ಅವರನ್ನು ಗೌರವದಿಂದ ಕಾಣುವ ಮನಸ್ಥಿತಿ ಬದಲಾಗಿದೆ. ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯು ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂದರು.

ADVERTISEMENT

ರೋಟರಿ ವಲಯ 9ರ ಸಹಾಯಕ ಗವರ್ನರ್ ಮಂಜುನಾಥ್ ಮಾತನಾಡಿ, ನಿಸ್ವಾರ್ಥ ಸೇವೆ ಮಾಡುವ ಪ್ರತಿಯೊಬ್ಬ ವ್ಯಕ್ತಿಯು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಅದೇ ಮಾರ್ಗದಲ್ಲಿ ಟೈಮ್ಸ್ ಗಂಗಾಧರ್ ಸಮಾಜದ ಭಾಗವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ವಿವಿಧ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಾದ ಎಚ್.ಡಿ. ಅಣ್ಣಾಜಿಗೌಡ, ಎಚ್.ಎಂ. ಮನೋಜ್ ಕುಮಾರ್, ರಹಮತ್ ಉಲ್ಲಾ, ವೈ. ಗಿರಿಜಾ ದಿನಕರ ಅವರಿಗೆ ಅಕ್ಷರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೋಟರಿ ವಲಯ 9ರ ಸೇನಾನಿ ಮಮತಾ ಪಾಟೀಲ್, ಅಕ್ಷರ ಅಕಾಡೆಮಿ ಸಂಯೋಜಕ ಕಾರ್ತಿಕ್, ರೋಟರಿ ಕ್ಲಬ್ ಆಫ್ ಹಾಸನ ರಾಯಲ್ ಕಾರ್ಯದರ್ಶಿ ರವಿ ಕುಮಾರ್ ಪಿ., ಖಜಾಂಚಿ ದಿಲೀಪ್ ಕುಮಾರ್ ಎಚ್.ಕೆ., ಸದಸ್ಯರಾದ ಯೋಗೇಶ್ ಎಸ್., ಸಚ್ಚಿನ್, ಡಾ. ವಿಕ್ರಂ, ಯೋಗೀಶ್ ಆರ್., ಸತೀಶ್, ಗಿರೀಶ್, ಪುನೀತ್, ಮಹೇಶ್ ಹಾಗೂ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.