ADVERTISEMENT

ಮನೆ ನಿರ್ಮಾಣಕ್ಕೆ ಅಡ್ಡಿ ಆರೋಪ: ದಯಾ ಮರಣಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2024, 16:05 IST
Last Updated 20 ಮಾರ್ಚ್ 2024, 16:05 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಶಿವಯೋಗಿಪುರದ ಯಶೋದಾ, ಚಂದ್ರಯ್ಯ ಧರಣಿ ನಡೆಸಿದರು
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಶಿವಯೋಗಿಪುರದ ಯಶೋದಾ, ಚಂದ್ರಯ್ಯ ಧರಣಿ ನಡೆಸಿದರು   

ಹಾಸನ: ನಮ್ಮ ಕುಟುಂಬಕ್ಕೆ‌ ರಕ್ಷಣೆ ನೀಡಬೇಕು. ಮನೆ ನಿರ್ಮಾಣ ಮಾಡಲು ಸಹಕಾರ ನೀಡಬೇಕು. ಇಲ್ಲವಾದರೇ ನಮಗೆ ದಯಾಮರಣ ನೀಡಬೇಕು ಎಂದು ಒತ್ತಾಯಿಸಿ ಶಿವಯೋಗಿಪುರ ನಿವಾಸಿಗಳಾದ ಯಶೋದಾ ಹಾಗೂ ಚಂದ್ರಯ್ಯ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ಈ ವೇಳೆ ಚಂದ್ರಯ್ಯ ಮಾತನಾಡಿ, ಶಿವಯೋಗಿಪುರ ಗ್ರಾಮದಲ್ಲಿ ಸ್ವಂತ ಮನೆಯಿದ್ದು, ಮಳೆಯಿಂದಾಗಿ ಮನೆ ಬಿದ್ದಿದೆ. ಸರ್ಕಾರದಿಂದ ₹ 95ಸಾವಿರ ಪಡೆದಿದ್ದೇವೆ. ಮನೆ ನಿರ್ಮಾಣ ಮಾಡಲು ಮುಂದಾದರೇ ಗ್ರಾಮದಲ್ಲಿರುವ ಕೆಲವರು ತೊಂದರೆ ಕೊಡುತ್ತಿದ್ದು, ಹಲವಾರು ಬಾರಿ ಎಲ್ಲ ಇಲಾಖೆಗಳಿಗೆ ದೂರು ನೀಡಿದ್ದರೂ  ಪ್ರಯೋಜನವಾಗಿಲ್ಲ. ಮಳೆಗಾಲ ಪ್ರಾರಂಭವಾಗುತ್ತಿದ್ದು, ವಾಸ ಮಾಡಲು ಮನೆ ಇಲ್ಲದಂತಾಗಿದೆ. ಕೂಡಲೇ ಅಗತ್ಯ ನೆರವು ನೀಡಬೇಕು ಇಲ್ಲವೇ ದಯಾಮರಣ ನೀಡಬೇಕು ಎಂದು ಕೋರಿದರು.

ಸರ್ಕಾರದ ಅನುದಾನದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಬೇಲೂರು ತಾಲ್ಲೂಕು ಪಂಚಾಯಿತಿಯ ಅನುಮೋದನೆ ಪಡೆದು ಮನೆ ನಿರ್ಮಾಣದ ಕಾಮಗಾರಿ ಪ್ರಾರಂಭಿಸಿದ್ದು, ದುರುದ್ದೇಶದಿಂದ ಕೆಲ ವ್ಯಕ್ತಿಗಳಾದ ರೌಡಿಶೀಟರ್ ತಿರುಮಲಹಳ್ಳಿ ಶಿವಕುಮಾರು, ತಿರುಮಲನಹಳ್ಳಿ ಹರೀಶ್ ಹಾಗೂ ಗ್ರಾಮದ ವ್ಯಕ್ತಿಗಳಾದ ಮಲ್ಲಿಕಾರ್ಜುನ, ಕುಸುಮ, ಸಿದ್ದಯ್ಯ, ಯಶೋದಮ್ಮ, ಶಶಿಕಲಾ, ಸಾವಿತ್ರಮ್ಮ ಶಿವಶಂಕರ, ಸುಜಾತಾ ಎಂಬುವವರು ದುರುದ್ದೇಶದಿಂದ ನಮಗೆ ಅಡ್ಡಿ ಉಂಟು ಮಾಡಲು ಅಂಬೇಡ್ಕರ್‌ ಅವರ ಪೋಟೋ ಮತ್ತು ಫ್ಲೆಕ್ಸ್‌ ಇಟ್ಟಿದ್ದಾರೆ ಎಂದು ದೂರಿದರು. 

ADVERTISEMENT

ನಮಗೆ ವಾಸ ಮಾಡಲು ಯಾವುದೇ ಮನೆ ಇಲ್ಲ. ಸಣ್ಣದೊಂದು ಗುಡಿಸಲಿಲ್ಲ ಎರಡು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದೇವೆ. ನಾವು ಬದುಕಲು ಕಷ್ಟವಾಗಿರುವುದರಿಂದ ಅಗತ್ಯ ನೆರವು ನೀಡಬೇಕು ಎಂದು ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.