ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ಮತ್ತರ ಗ್ರಾಮದ ರೈತ ಚನ್ನೇಗೌಡ (70) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
1.33 ಎಕರೆ ಜಮೀನು ಹೊಂದಿದ್ದ ಇವರು ಮಲ್ಲಿಪಟ್ಟಣದ ಕೆನರಾ ಬ್ಯಾಂಕ್ ನಲ್ಲಿ ₹1ಲಕ್ಷ, ಕೈಸಾಲ ₹3 ಲಕ್ಷ, ಸಂಘ ಸಂಸ್ಥೆಯಿಂದ ₹1ಲಕ್ಷ ಸಾಲ ಮಾಡಿದ್ದರು. ಇವರಿಗೆ ಪತ್ನಿ , ಒಬ್ಬರು ಪುತ್ರ ಹಾಗೂ ಪುತ್ರಿ ಇದ್ದಾರೆ.
ಮೃತ ರೈತರ ಮನೆಗೆ ಭೇಟಿ ನೀಡಿದ್ದ ನೀಡಿದ್ದ ತಹಶೀಲ್ದಾರ್ ಕೆ.ಸಿ ಸೌಮ್ಯ ಕುಟುಂಬದವರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ದೊರಕಿಸಿ ಕೊಡುವುದಾಗಿ ಹೇಳಿದರು. ಸಹಾಯಕ ಕೃಷಿ ನಿರ್ದೇಶಕಿ ಕೆ. ಜಿ. ಕವಿತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.