ADVERTISEMENT

ಅರಕಲಗೂಡು: ಶಂಭುನಾಥ ಸ್ವಾಮೀಜಿ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 12:01 IST
Last Updated 10 ಮಾರ್ಚ್ 2025, 12:01 IST
ಅರಕಲಗೂಡು ದೊಡ್ಡಮ್ಮ ದೇವಾಲಯದಲ್ಲಿ ಸೋಮವಾರ ಆದಿ ಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿಯವರ ಜನ್ಮ ದಿನದ ಪ್ರಯುಕ್ತ ಅನ್ನ ದಾಸೋಹ ಏರ್ಪಡಿಸಲಾಗಿತ್ತು.
ಅರಕಲಗೂಡು ದೊಡ್ಡಮ್ಮ ದೇವಾಲಯದಲ್ಲಿ ಸೋಮವಾರ ಆದಿ ಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿಯವರ ಜನ್ಮ ದಿನದ ಪ್ರಯುಕ್ತ ಅನ್ನ ದಾಸೋಹ ಏರ್ಪಡಿಸಲಾಗಿತ್ತು.   

ಅರಕಲಗೂಡು: ಆದಿ ಚುಂಚನಗಿರಿ ಹಾಸನ ಶಾಖಾಮಠದ ಶಂಭುನಾಥ ಸ್ವಾಮೀಜಿ ಜನ್ಮ ದಿನದ ಪ್ರಯುಕ್ತ ಪಟ್ಟಣದ ಬಿಜಿಎಸ್ ಬಳಗ, ಮತ್ತು ಮಹಿಳಾ ಒಕ್ಕಲಿಗರ ವೇದಿಕೆ ಸದಸ್ಯರು ಸೋಮವಾರ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಲ್ಲಿ ಶ್ರೀಗಳ ಹೆಸರಿನಲ್ಲಿ ಪೂಜೆ ಮತ್ತು ಅನ್ನ ದಾಸೋಹ ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಾಲ್ಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಎಚ್.ಎಸ್. ರಶ್ಮಿ ಮಾತನಾಡಿ, ‘ಶಂಭುನಾಥ ಸ್ವಾಮೀಜಿ ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜ ಒಗ್ಗೂಡಿಸುವುದರ ಜೊತೆಗೆ ಶೈಕ್ಷಣಿಕವಾಗಿ ಉತ್ತಮ ಕೆಲಸ ಮಾಡುತ್ತಿದ್ದು ಇವರ ಚಿಂತನೆಗಳು ಸಮಾಜಕ್ಕೆ ಮಾದರಿಯಾಗಿದೆ’ ಎಂದರು.

ಮುಖಂಡರಾದ ಬೈಚನಹಳ್ಳಿ ರಾಜೀವ್, ಪ್ರಭು ಶ್ರೀಧರ್, ಟಿ.ಸಿ.ಮೋಹನ್, ಬರಗೂರು ರಾಜೇಶ್, ಗ್ಯಾಸ್ ಚಂದ್ರು, ಮಹೇಶ್ ಹೊಡೆನೂರು ಮತ್ತು ಬಿಜಿಎಸ್ ಬಳಗದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.