
ಬಾಗೂರು (ನುಗ್ಗೇಹಳ್ಳಿ): ರಾಷ್ಟ್ರೀಯ ಹೆದ್ದಾರಿ ನುಗ್ಗೇಹಳ್ಳಿ ಕ್ರಾಸ್‌ನಲ್ಲಿರುವ ಹೋಟೆಲ್‌ನಲ್ಲಿ 2000–01ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದ ಸರ್ಕಾರಿ ಪ್ರೌಢಶಾಲೆಯಲ್ಲಿ 2000-01ನೇ ಸಾಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಗೂ ಹಾಲಿ ಶಿಕ್ಷಣ ಇಲಾಖೆಯ ಡಿಎಸ್ಇಆರ್‌ಟಿ ಸಹಾಯಕ ನಿರ್ದೇಶಕಿ ಭಾನುಮತಿ ಟಿ.ಎನ್, ಗುರು ಶಿಷ್ಯರ ಸಂಬಂಧ ಅಂತ್ಯಗೊಂಡು 25 ವರ್ಷಗಳೇ ಕಳೆದಿವೆ. ಆದರೂ ನೆಚ್ಚಿನ ಶಿಕ್ಷಕರಿಗೆ ಗುರುವಂದನಾ ಕಾರ್ಯಕ್ರಮದ ಮೂಲಕ ಗೌರವ ಸಲ್ಲಿಸುತ್ತಿರುವುದು ವಿದ್ಯಾರ್ಥಿಗಳಿಗೆ ಶಿಕ್ಷಕರ ಮೇಲಿರುವ ಗೌರವ ಪ್ರೀತಿಯನ್ನು ತೋರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಮ್ಮನೆಚ್ಚಿನ ಶಿಕ್ಷಕರಾದ ಟಿ.ಎನ್ ಭಾನುಮತಿ, ಬಸವರಾಜೇಗೌಡ ಬಿ.ಬಿ, ಎಂ.ಸಿ ಹಲಗೇಗೌಡ, ಎಚ್ಚರ ಸೂರ್ಯನಾರಾಯಣ, ರಾಮಸ್ವಾಮಿ ಪಿ, ರಂಗಸ್ವಾಮಿ, ಅನಿತಾ ಕುಮಾರಿ ಎಂ.ಆರ್, ಹಿರಿಯಣ್ಣ ಜೆ, ಸತೀಶ್ ಎಚ್.ಎಚ್, ಮಂಜುನಾಥ್, ವಿಜಯ ಕುಮಾರಿ ಜಿ.ವಿ ಅವರನ್ನು ಹಳೆ ವಿದ್ಯಾರ್ಥಿಗಳು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರ ಕುಟುಂಬಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.