ADVERTISEMENT

ಬೇಲೂರಿನ ಶೃಂಗೇರಿ ಶಂಕರ ಮಠದಲ್ಲಿ ಚಂಡಿಕಾ ಹೋಮ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 6:46 IST
Last Updated 23 ಫೆಬ್ರುವರಿ 2026, 6:46 IST
ಬೇಲೂರಿನ  ಶೃಂಗೇರಿ ಶಂಕರ ಮಠದ 12ನೇ ವಾರ್ಷಿಕೋತ್ಸವದ ಅಂಗವಾಗಿ ಮಠದ ಧರ್ಮಾಧಿಕಾರಿ ಸಿ. ಆರ್. ವಿಜಯಕೇಶವ  ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು.
ಬೇಲೂರಿನ  ಶೃಂಗೇರಿ ಶಂಕರ ಮಠದ 12ನೇ ವಾರ್ಷಿಕೋತ್ಸವದ ಅಂಗವಾಗಿ ಮಠದ ಧರ್ಮಾಧಿಕಾರಿ ಸಿ. ಆರ್. ವಿಜಯಕೇಶವ  ನೇತೃತ್ವದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು.   

ಬೇಲೂರು: ಇಲ್ಲಿನ ಶೃಂಗೇರಿ ಶಂಕರ ಮಠದ 12ನೇ ವಾರ್ಷಿಕೋತ್ಸವದ ಅಂಗವಾಗಿ ಭಾನುವಾರ ಚಂಡಿಕಾ ಹೋಮ ನೆರವೇರಿಸಲಾಯಿತು.

ಶಾರದಪರಮೇಶ್ವರಿ ವಿಗ್ರಹಕ್ಕೆ ಮಹಾಭಿಷೇಕ, ಕುಂಕುಮಾರ್ಚನೆ, ಮಹಾ ಮಂಗಳಾರತಿಯನ್ನು ನಡೆಸಲಾಯಿತು. ಬೆಳಿಗ್ಗೆ ಸಾಮೂಹಿಕ ಸಂಕಲ್ಪ ಪೂಜೆ, ವಿಶೇಷ ಪೂಜಾ ವಿಧಿ, ಪುರೋಹಿತ ನರಸಿಂಹಸ್ವಾಮಿ ನೇತೃತ್ವದಲ್ಲಿ ಮಹಾಚಂಡಿಕಾ ಹೋಮ ನಡೆಯಿತು. ಪೂರ್ಣಾಹುತಿ, ಪ್ರಸಾದ ವಿನಿಯೋಗ ಮಾಡಲಾಯಿತು.

ಮಠದ ಧರ್ಮಾಧಿಕಾರಿ ಸಿ.ಆರ್. ವಿಜಯಕೇಶವ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಕೆಟ್ಟ ಹವ್ಯಾಸ,ನಾಶವಾಗಿ ಜ್ಞಾನ, ಉತ್ತಮ ಸಂಸ್ಕಾರ, ಸೌಹಾರ್ದ ಬೆಳೆಯುತ್ತದೆ ಎಂದರು.

ADVERTISEMENT

ಪುರೋಹಿತರಾದ ರಾಘವೇಂದ್ರ, ಸುಮಂತ್ ಕುಮಾರ್ ಶರ್ಮಾ, ಪ್ರಶಾಂತ್ ಕುಮಾರ್, ಹೇಮಂತ್, ಹಾನಂಬಿ, ಪ್ರಮುಖರಾದ ಎಂ.ಜೆ.ಅನಂತಮೂರ್ತಿ, ರಮೇಶ್, ಕಾಫಿ ಬೋರ್ಡ್ ಸುರೇಶ್, ತೊ.ಚ. ಅನಂತ ಸುಬ್ಬರಾಯ, ಹೀರಣಯ್ಯ, ನಾರಾಯಣರಾವ್, ಭಜನಾ ಮಂಡಳಿಯ ಶಾರದಮ್ಮ, ರಜನಿ  ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.