ADVERTISEMENT

ಬೇಲೂರು | ‘ಹೆಕ್ಟೇರ್‌ಗೆ ₹60 ಸಾವಿರ ಪರಿಹಾರ ಕೊಡಿ’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2024, 14:08 IST
Last Updated 8 ಆಗಸ್ಟ್ 2024, 14:08 IST
ಬಿ.ಪಿ.ಬಸವರಾಜು
ಬಿ.ಪಿ.ಬಸವರಾಜು   

ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ಅತಿವೃಷ್ಟಿಗೆ ಕಾಫಿ ಬೆಳೆ ಶೇ 60ರಷ್ಟು ನಾಶವಾಗಿದ್ದು, ವೈಜ್ಙಾನಿಕ ಪರಿಹಾರ ನೀಡಬೇಕು ಎಂದು ಕಾಫಿ ಬೆಳೆಗಾರರ ಸಂಘದ  ಹೋಬಳಿ ಘಟಕದ ಅಧ್ಯಕ್ಷ ಬಿ.ಪಿ.ಬಸವರಾಜು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಂದಾಯ ಇಲಾಖೆ, ಕಾಫಿಮಂಡಳಿ, ತೋಟಗಾರಿಕೆ ಹಾಗೂ ಕೃಷಿಇಲಾಖೆಗಳು ಜಂಟಿ ಸರ್ವೆ ನಡೆಸಿ ಎನ್.ಡಿ.ಆರ್.ಎಫ್‌ ಮತ್ತು ಎಸ್.ಡಿ.ಆರ್.ಎಫ್‌ ನಿಂದ ಪ್ರತಿ ಹೆಕ್ಟೇರ್‌ಗೆ ₹60ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಮಳೆಯಿಂದ ಕಾಫಿ ಗಿಡದಲ್ಲಿ ಕೋಳೆರೋಗ ಕಾಣಿಸಿಕೊಂಡಿದೆ, ಶೇ 60 ರಷ್ಟು ಫಸಲು ಉದುರಿ, ಹಾನಿಯಾಗಿದೆ, ಕಾಳುಮೆಣಸು ಬಳ್ಳಿಗಳು ಸಹ ನೆಲಕಚ್ಚಿವೆ. ಭತ್ತ, ಅಡಿಕೆ ಬೆಳೆಗಳು ನಾಶವಾಗಿವೆ ಎಂದರು.

ಪ್ರಧಾನ ಕಾರ್ಯದರ್ಶಿ ಕೆ.ಬಿ.ಪುಟ್ಟರಾಜು, ಉಪಾಧ್ಯಕ್ಷ ಶರೀಫ್‌ ಪರ್ಹಾನ್, ಎಂ.ಕೆ.ರಂಜಿತ್ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.