
ಪ್ರಜಾವಾಣಿ ವಾರ್ತೆಸಾಂದರ್ಭಿಕ ಚಿತ್ರ
- ಎ.ಐ ಚಿತ್ರ
ಬೇಲೂರು (ಹಾಸನ ಜಿಲ್ಲೆ): ತಾಲ್ಲೂಕಿನ ಬೆಳ್ಳಾವರದಲ್ಲಿ ವ್ಯಕ್ತಿಯೊಬ್ಬರು ಮಾತುಕತೆಗೆಂದು ಮನೆಗೆ ಮಾವನನ್ನು ಕರೆಸಿಕೊಂಡಿದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ಬಿಕ್ಕೋಡು ಗ್ರಾಮದ ಅನಿಲ್ ಮೃತ. ಅಳಿಯ, ಆರೋಪಿ ರಾಜೇಶ್ ತಲೆಮರೆಸಿಕೊಂಡಿದ್ದು, ಅರೇಹಳ್ಳಿ ಪೊಲೀಸರು ಶೋಧ ನಡೆಸಿದ್ದಾರೆ.
ಬೆಳ್ಳಾವರದ ರಾಜೇಶ್ ಹಾಗೂ ಅನಿಲ್ ಅವರ ಮಗಳು ಅನಿಷಾ, ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಕುಟುಂಬದೊಳಗೆ ಅಸಮಾಧಾನ ಮತ್ತು ವೈಮನಸ್ಸು ಇತ್ತು. ಇದನ್ನು ನಿವಾರಿಸಲು ತಂದೆ ಅನಿಲ್ ಅವರನ್ನು ಅನಿಷಾ ಶನಿವಾರ ಮನೆಗೆ ಕರೆಸಿಕೊಂಡಿದ್ದಳು.
ಈ ವೇಳೆ ಅಳಿಯ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅನಿಲ್ ಅವರನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.