ADVERTISEMENT

ಅರಕಲಗೂಡು: ಬಿಜಿಎಸ್ ಪದವಿಪೂರ್ವ ಕಾಲೇಜಿಗೆ ಸಮಗ್ರ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 4:37 IST
Last Updated 12 ಸೆಪ್ಟೆಂಬರ್ 2025, 4:37 IST
ಅರಕಲಗೂಡು ತಾಲ್ಲೂಕು ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು
ಅರಕಲಗೂಡು ತಾಲ್ಲೂಕು ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು   

ಅರಕಲಗೂಡು: ತಾಲ್ಲೂಕಿನ ಮಲ್ಲಿಪಟ್ಟಣದಲ್ಲಿ ಈಚೆಗೆ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಪಟ್ಟಣದ ಬಿಜಿಎಸ್ ಪದವಿಪೂರ್ವ ಕಾಲೇಜು ಬಾಲಕರ, ಬಾಲಕಿಯರ ಹಾಗೂ ಕ್ರೀಡಾ ಕೂಟದ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಬಾಲಕರ ವಿಭಾಗದ ವೈಯುಕ್ತಿಕ ಚಾಂಪಿಯನ್ ಶಿಪ್ ಗಳಿಸಿರುವ ಎಂ.ಯು. ನಿಶಾನ್ 100 ಮೀಟರ್, 200 ಮೀಟರ್ ಓಟ ಹಾಗೂ ತ್ರಿವಿಧ ಜಿಗಿತ ಸ್ಫರ್ದೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 400 ಮೀಟರ್ಟರ್, 1500 ಮೀಟರ್ ಹಾಗೂ 3000 ಮೀರ್ಟರ್ ಓಟ ಸ್ಫರ್ಧೆಯಲ್ಲಿ ಧನರಾಜ್, ಉದ್ದ ಜಿಗಿತ ಸ್ಫರ್ಧೆಯಲ್ಲಿ ಶ್ರೇಯಸ್ ನಾಯಕ್, ಎತ್ತರ ಜಿಗಿತದಲ್ಲಿ ಬಿ.ಪಿ.ನಿಖಿಲ್, ಗುಂಡು ಎಸೆತದಲ್ಲಿ ಎಸ್. ಸುಮಂತ್ ಪ್ರಥಮ ಸ್ಥಾನ ಗಳಿಸಿದ್ದಾರೆ.

100 ಮೀಟರ್, 200 ಮೀಟರ್ ಓಟದಲ್ಲಿ ಎಸ್. ಎನ್. ಮಧು, , 400 ಮೀಟರ್ ಓಟ ಶ್ರೇಯಸ್ ನಾಯಕ್, 800 ಮತ್ತು 3 ಸಾವಿರ ಮೀಟರ್ ಓಟದಲ್ಲಿ ಎಸ್ .ಎಚ್.ಹೃತಿಕ್ ಗೌಡ, ತ್ರಿವಿಧ ಜಿಗಿತ ಬಿ.ಪಿ. ನಿಖಿಲ್, ಎತ್ತರ ಜಿಗಿತ ಎ. ಬಿ. ಉಲ್ಲಾಸ್, ಡಿಸ್ಕಸ್ ಥ್ರೋ, ಗುಂಡು ಎಸೆತದಲ್ಲಿ ಬಿ. ಎನ್. ಗೌತಮ್ ರಾಜ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ADVERTISEMENT

ಬಾಲಕಿಯರ ವಿಭಾಗದಲ್ಲಿ 1500 ಮತ್ತು 800 ಮೀಟರ್ ಓಟ ಎಂ.ಎನ್. ಯಶಸ್ವಿನಿ, ತ್ರಿವಿಧ ಜಿಗಿತ ಕೆ.ಕೆ. ನಂದಿತಾ, ಎತ್ತರ ಜಿಗಿತದಲ್ಲಿ ಪ್ರಜ್ಞಾ ಪ್ರಥಮ ಸ್ಥಾನ ಗಳಿಸಿದ್ದಾರೆ. 100 ಮೀಟರ್ ಓಟ ಪ್ರಜ್ಞಾ, 400 ಮೀಟರ್ ಓಟ, 800 ಮೀಟರ್ ಓಟ ಹಾಗೂ ತ್ರಿವಿಧ ಜಿಗಿತದಲ್ಲಿ ಬಿ.ಪಿ. ಸಂಜನಾ, ಉದ್ದ ಜಿಗಿತದಲ್ಲಿ ಕೆ.ಕೆ. ನಂದಿತ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸಾಧಕ ವಿದ್ಯಾರ್ಥಿಗಳನ್ನು ಬಿಜಿಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಶಂಭುನಾಥ ಸ್ವಾಮೀಟರ್ಜಿ ಮತ್ತು ಪ್ರಾಂಶುಪಾಲ ಮಹೇಶ್ ಹೊಡೆನೂರು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.