ADVERTISEMENT

ಹಾಸನ| ಭೀಮಾ ಕೋರೆಗಾಂವ್ ವಿಜಯೋತ್ಸವ ರ‍್ಯಾಲಿಗೆ ಡಿಸಿ ಚಾಲನೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:04 IST
Last Updated 15 ಜನವರಿ 2026, 6:04 IST
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬೈಕ್‌ ರ‍್ಯಾಲಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಸಿರು ನಿಶಾನೆ ತೋರಿದರು
ಹಾಸನದ ಜಿಲ್ಲಾಧಿಕಾರಿ ಕಚೇರಿ ಎದುರು ಬೈಕ್‌ ರ‍್ಯಾಲಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹಸಿರು ನಿಶಾನೆ ತೋರಿದರು   

ಹಾಸನ: ನಗರದಲ್ಲಿ ಜ. 20ರಂದು ನಡೆಯಲಿರುವ ಭೀಮಾ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ವಿಜಯೋತ್ಸವ ಸಮಿತಿ ವತಿಯಿಂದ ಬುಧವಾರ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ರ‍್ಯಾಲಿಯಲ್ಲಿ ಸಮುದಾಯದ ನೂರಾರು ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸುವ ಮೂಲಕ ಗಮನ ಸೆಳೆದರು.

ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ನಗರದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಮಿತಿ ಮುಂದಾಗಿರುವುದು ಶ್ಲಾಘನೀಯ. ಇದೇ ಮೊದಲ ಬಾರಿಗೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಮೊಮ್ಮಗ ಭೀಮರಾವ್ ಅಂಬೇಡ್ಕರ್ ಹಾಸನಕ್ಕೆ ಬರಲಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಸಂತಸದ ಸಂಗತಿ ಎಂದರು.

ADVERTISEMENT

ಭೀಮಾ ಕೋರೆಗಾಂವ್ ಯುದ್ಧವು ಐತಿಹಾಸಿಕ ಹೋರಾಟವಾಗಿದ್ದು, ಇಂತಹ ಅರ್ಥಪೂರ್ಣ ಘಟನೆ ಸ್ಮರಿಸುವ ಕಾರ್ಯಕ್ರಮ ಆಯೋಜಿಸಿರುವ ಎಲ್ಲರಿಗೂ ಅಭಿನಂದನೆಗಳು ಎಂದರು.

ಆಯೋಜನಾ ಸಮಿತಿಯ ಎಚ್‌.ಕೆ. ಸಂದೇಶ, ಕೃಷ್ಣದಾಸ, ಅಂಬುಗ ಮಲ್ಲೇಶ, ಹೆತ್ತೂರು ನಾಗರಾಜ, ರಾಜೇಶ್, ಶಿವಮ್ಮ, ಗೊರೂರು ರಾಜು, ರಂಜಿತ್‌ ಗೊರೂರು, ಪತ್ರಕರ್ತೆ ಲೀಲಾವತಿ, ಭಾಗ್ಯ ಕಲವೀರ್‌, ಕಾರ್ಯದರ್ಶಿ ತೇಜೂರು ಮಂಜು, ಉಮೇಶ್, ರಾಜಶೇಖರ್, ವೆಂಕಟೇಶ್ ಬಾಕರಹಳ್ಳಿ, ಜಗದೀಶ್ ಚೌಡುಹಳ್ಳಿ, ಗೋವಿಂದರಾಜು, ಮಣಿಕಂಠ, ದೇವರಾಜು, ಪ್ರದೀಪ್, ನವೀನ್, ರಾಮು, ತೋಟೇಶ್, ಪ್ರಸನ್ನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.