ADVERTISEMENT

ಕಟ್ಟಡ ಮಾಲೀಕ ಆತ್ಮಹತ್ಯೆಗೆ ಯತ್ನ

ಬೌನ್ಸ್ ಸ್ಕೂಟರ್ ಗೆ ಬೆಂಕಿ ಬಿದ್ದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 15:07 IST
Last Updated 29 ಜನವರಿ 2021, 15:07 IST

ಹಾಸನ: ಶಾರ್ಟ್‌ ಸರ್ಕೀಟ್‌ನಿಂದ ಕಟ್ಟಡಕ್ಕೆ ಹಾನಿಯಾದ್ದರಿಂದ ಮನನೊಂದ ಮಾಲೀಕ ಜಗದೀಶ್ಶುಕ್ರವಾರ ಆತ್ಮಹತ್ಯೆ ಯತ್ನಿಸಿದ್ದು, ಪತ್ನಿಗೂ ಹೃದಯಾಘಾತವಾಗಿದೆ

ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಬೌನ್ಸ್ ಸೆಲ್ಫ್ ಡ್ರೈವ್ ಸ್ಕೂಟರ್ ಗಳ ಚಾರ್ಜಿಂಗ್ ಕೇಂದ್ರದಕಟ್ಟಡದಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡ ಪರಿಣಾಮ 80 ಕ್ಕೂ ಹೆಚ್ಚು ಸ್ಕೂಟರ್ಗಳುಬೆಂಕಿಗಾಹುತಿಯಾಗಿದ್ದವು.

ಕಟ್ಟಡ ಬಿರುಕು ಬಿಟ್ಟಿದ್ದರಿಂದ ಮನನೊಂದು ಸೀಮೆ ಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಸ್ಥಳೀಯರು ತಡೆದಿದ್ದಾರೆ. ಈ ವಿಷಯ ತಿಳಿದ ಪತ್ನಿಗೂ ಲಘು ಹೃದಯಾಘಾತವಾಗಿದೆ. ಇಬ್ಬರೂಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ADVERTISEMENT

ಸುಮಾರು ₹ 1.20 ಕೋಟಿ ಖರ್ಚು ಮಾಡಿ ಕಟ್ಟಿದ ಮನೆಯ ಮೇಲ್ಮಹಡಿಯಲ್ಲಿ ಮಾಲೀಕ ಜಗದೀಶ್‌ ಮತ್ತು ಅವರ ಕುಟುಂಬದ ಸದಸ್ಯರು ವಾಸವಿದ್ದರು. ಮನೆ ಹಾಳಾಯಿತು ಎಂದು ಜಗದೀಶ್ ಮನನೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.