ADVERTISEMENT

ಮಗು ಅಪಹರಣ: 6 ಮಂದಿ ಬಂಧನ

ಅರಕಲಗೂಡು ಸರ್ಕಾರಿ ಆಸ್ಪತ್ರೆ; ವಾರದ ಬಳಿಕ ಅಮ್ಮನ ಮಡಿಲು ಸೇರಿದ ಕಂದಮ್ಮ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 15:49 IST
Last Updated 21 ಮಾರ್ಚ್ 2022, 15:49 IST
ಆರ್.ಶ್ರೀನಿವಾಸ್ ಗೌಡ
ಆರ್.ಶ್ರೀನಿವಾಸ್ ಗೌಡ   

ಹಾಸನ: ಅರಕಲಗೂಡಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಾರ್ಚ್‌ 13ರಂದು ನಡೆದಿದ್ದ ನವಜಾತ ಶಿಶು ಅಪಹರಣ ಪ್ರಕರಣಕ್ಕೆ ಸಂಬಂ ಧಿಸಿದಂತೆಒಟ್ಟು 6 ಆರೋಪಿಗಳನ್ನು ಅರಕಲಗೂಡು ಪೊಲೀಸರು ಬಂಧಿ ಸಿದ್ದಾರೆ.

‘ಅರಕಲಗೂಡು ತಾಲ್ಲೂಕು ದೊಡ್ಡಮಗ್ಗೆ ಹೋಬಳಿಯ ಕಣಿಯಾರ್‌ ಕೊಪ್ಪಲುಗ್ರಾಮದ ಸುಮಾ, ಯಶ್ವಂತ್‌, ಶೈಲಜಾ, ಬರಗೂರು ಗ್ರಾಮದ ಕಾರು ಚಾಲಕಪ್ರಕಾಶ್‌, ಮೈಸೂರು ತಾಲ್ಲೂ ಕಿನ ಹಳೆ ಕೆಸರೆ ಗ್ರಾಮದ ಸುಷ್ಮಾ, ಚನ್ನಪಟ್ಟಣದ ಅಂಬೇಡ್ಕರ್‌ ನಗರದ ಅರ್ಪಿತಾ ಅವರನ್ನು ಬಂಧಿಸಲಾಗಿದೆ’ ಎಂದುಸೋಮವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಪೊಲೀಸ್‌ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ತಿಳಿಸಿದರು.

‘ವಿವಾಹವಾಗಿ ಹಲವು ವರ್ಷ ಗಳಿಂದ ತನ್ನ ಮಗಳಿಗೆ ಮಕ್ಕಳಾಗದ ಕಾರಣಯುವತಿಯ ತಾಯಿ ಹಾಗೂ ಸಹೋದರ, ಸಹೋದರಿ ಸೇರಿ ಕೃತ್ಯ ಎಸಗಿದ್ದಾರೆ.ಆರೋಪಿಗಳ ಪೈಕಿ ಒಬ್ಬರು ನರ್ಸ್‌ ವೇಷ ಧರಿಸಿ ಬಂದು ಮಗು ಅಪಹರಿಸಿದ್ದರು. ಈ ಎಲ್ಲಾ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ಎರಡು, ಮೂರು ಮಕ್ಕಳಿದ್ದವರು ಅಥವಾ ಆರ್ಥಿಕವಾಗಿ ಹಿಂದುಳಿದವರಮಕ್ಕಳನ್ನು ಅಪಹರಿಸಿದರೆ ಅಷ್ಟೊಂದು ಗಂಭೀರ ವಾಗಿ ತೆಗೆದುಕೊಳ್ಳುವುದಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆ ಆಯ್ಕೆ ಮಾಡಿಕೊಂಡಿದ್ದರು’ ಎಂದುವಿವರಿಸಿದರು.

ADVERTISEMENT

‘ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ, ತಾಯಿಗೆಒಪ್ಪಿಸಲಾಗಿದೆ. 2017ರಲ್ಲಿ ಹಿಮ್ಸ್‌ನಲ್ಲಿ ನಡೆದ ಮಗು ಅಪಹರ ಣದಆರೋಪಿಗಳು ಇನ್ನೂ ಪತ್ತೆಯಾಗಿಲ್ಲ’ ಎಂದರು.

ಮಹಿಳೆ ಕೊಲೆ ಆರೋಪಿ ಸೆರೆ: ಅರಸೀಕೆರೆ ರಸ್ತೆಯ ದೊಡ್ಡಪುರದ ರೇವತಿ ಕೊಲೆ ಪ್ರಕರಣದಲ್ಲಿ ಆರೋಪಿ ಲತೇಶನನ್ನು ಬಂಧಿಸಿ, ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿ ಕೆಲ ವರ್ಷದ ಹಿಂದೆ ಬಾಲಕಿ ಮೇಲೆ ಅತ್ಯಾಚಾರ ನಡೆಸಿ,ಕೊಲೆ ಮಾಡಿದ ಆರೋಪದಡಿ ಜೈಲು ಸೇರಿದ್ದ. ಸಾಕ್ಷ್ಯಾಧಾರ ಕೊರತೆಯಿಂದಖುಲಾಸೆಯಾಗಿದ್ದ. ಪತಿಗೆ ವಿಚ್ಛೇದನ ನೀಡಿ, ತನ್ನನ್ನು ಮದುವೆಯಾಗುವಂತೆ ಆರೋಪಿ, ಮಹಿಳೆಗೆ ಬೆದರಿಕೆ ಹಾಕಿ, ಹಿಂಸೆ ನೀಡುತ್ತಿದ್ದ. ಆಕೆ ನಿರಾಕರಿಸಿದಕಾರಣ ಹಿಂದಿನಿಂದ ಬಂದು ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆಎಂದು ಎಸ್‌ಪಿ ತಿಳಿಸಿದರು.

ಮೂವರ ಬಂಧನ: ಅರಕಲಗೂಡು ತಾಲ್ಲೂಕಿನ ಬೆಳವಾಡಿ ಬಳಿ ಸುಟ್ಟ ಕಾರಿನಲ್ಲಿಮೃತದೇಹ ಪತ್ತೆ ಪ್ರಕರಣದಲ್ಲಿ ಕುಶಾಲನಗರ ತಾಲ್ಲೂ ಕಿನಗೊಂದಿಬಸವನಹಳ್ಳಿಯ ಶಶಿ ಕುಮಾರ್‌, ಶಿವ, ಯೋಗೇಶ್‌ನನ್ನು ಬಂಧಿಸಲಾಗಿದೆ.

ಅನಿಲ್‌ಕುಮಾರ್ ಮತ್ತು ಶಶಿ ಕುಮಾರ್ ಪತ್ನಿ ಒಂದೇ ಗ್ರಾಮದವರು. ಈಕೆ ಜತೆ ಸಲುಗೆಯಿಂದ ವರ್ತಿಸುತ್ತಿದ್ದ. ಇದನ್ನು ಸಹಿಸದ ಶಶಿಕುಮಾರ್‌, ಅನಿಲ್‌ ಕುಮಾರ್‌ನನ್ನು ರಾಜಿಸಂಧಾನಕ್ಕೆ ಕರೆಸಿಕೊಂಡಿದ್ದಾನೆ. ತನ್ನ ಇಬ್ಬರು ಸ್ನೇಹಿತರ ಜೊತೆ ಇನ್ನೊವಾಕಾರಿನಲ್ಲಿ ಗೊಂದಿಬಸವನಹಳ್ಳಿ ರಸ್ತೆಗೆ ಕರೆದು ಕೊಂಡು ಹೋಗಿ ಕಬ್ಬಿಣದಪೈಪ್‌ನಿಂದ ತಲೆಗೆ ಹೊಡೆದು ಕೊಲೆ ಮಾಡಿ, ಶವ ವನ್ನು ಬೆಳವಾಡಿ ಗ್ರಾಮದಕೆರೆ ಏರಿಕೆ ಮೇಲೆ ತಂದು ಪೆಟ್ರೋಲ್‌ ಸುರಿದ ಸುಟ್ಟು ಹಾಕಿದ್ದಾರೆ. ಪ್ರಕರಣದಲ್ಲಿಆರೋಪಿ ಪತ್ನಿಯ ಪಾತ್ರವಿಲ್ಲ ಎಂದು ಎಸ್‌ಪಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.