ಚನ್ನರಾಯಪಟ್ಟಣದಲ್ಲಿ ಗೌರಿ, ಗಣೇಶ ಹಬ್ಬದ ಪ್ರಯುಕ್ತ 109 ಪೌರ ಕಾರ್ಮಿಕರಿಗೆ ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿ ಮಂಗಳವಾರ ಬಟ್ಟೆಗಳನ್ನು ವಿತರಿಸಿದರು. ಎಂ.ಕೆ.ಮಂಜೇಗೌಡ, ಎ.ಸಿ.ಆನಂದ್‍ಕುಮಾರ್, ಸಿ.ಎಸ್.ಪ್ರಕಾಶ್ ಭಾಗವಹಿಸಿದ್ದರು
ಚನ್ನರಾಯಪಟ್ಟಣ: ‘ಪಟ್ಟಣವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರ ಸೇವೆಯನ್ನು ಮರೆಯುವಂತಿಲ್ಲ’ ಎಂದು ಕಾಂಗ್ರೆಸ್ ಮುಖಂಡ ಎಂ.ಎ.ಗೋಪಾಲಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಗೌರಿ, ಗಣೇಶ ಹಬ್ಬದ ಅಂಗವಾಗಿ 109 ಪೌರಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವವದಲ್ಲಿ ಕಾಂಗ್ರೆಸ್ ಸರ್ಕಾರವು ಪೌರಕಾರ್ಮಿಕರ ವೇತನ ಹೆಚ್ಚಿಸಿದೆ. ಇನ್ನು ಕೆಲವು ಬೇಡಿಕೆಗಳಿದ್ದರೆ ಅದನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು’ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಕೆ.ಮಂಜೇಗೌಡ ಮಾತನಾಡಿ, ‘ರಾಜ್ಯಸರ್ಕಾರದ ಯೋಜನೆಗಳು ಪೌರಕಾರ್ಮಿಕರಿಗೆ ಉಪಯುಕ್ತ’ ಎಂದು ಹೇಳಿದರು.
ಕಾಂಗ್ರೆಸ್‍ಮುಖಂಡ ಎ.ಸಿ.ಆನಂದ ಕುಮಾರ್, ಪುರಸಭೆ ಸದಸ್ಯರಾದ ಸಿ.ಎಸ್.ಪ್ರಕಾಶ್, ಎಸ್.ಆದರ್ಶ್, ಸುಜಾತಾ, ರವಿ, ಪ್ರೇಮ್‍ಕುಮಾರ್, ಪೀಕಾರ್ಡ್ ಬ್ಯಾಂಕ್ ನಿರ್ದೇಶಕ ಕೆ.ಆರ್. ಬಾಬು, ಮುಖಂಡರಾದ ವಿನೋದ್, ಜಗದೀಶ್, ಗಿರೀಶ್, ಸಿ.ಎಸ್. ಯುವರಾಜ್, ಎಚ್.ಎನ್.ಲವಣ್ಣ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.