ಸಿದ್ದರಾಮಯ್ಯ
ಅರಸೀಕೆರೆ: ಜುಲೈ 26 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರಕ್ಕೆ ಬರಲಿದ್ದು, ಶಿಕ್ಷಣ ಸಂಸ್ಥೆಗಳ ಉದ್ಘಾಟನೆ, ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವರು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಜಾಜೂರು ಗ್ರಾಮದ ಬಳಿ ನಗರಸಭೆ ನಿರ್ಮಿಸಿದ್ದ ಸ್ವಾಗತ ಕಮಾನನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಪ್ರವೇಶ ಜಾಗದಲ್ಲಿ ಮಾಲೇಕಲ್ಲು ತಿರುಪತಿಯ ವೆಂಕಟರಮಣ ಸ್ವಾಮಿ, ಮೈಸೂರು – ಹಾಸನ ರಸ್ತೆಯಲ್ಲಿ ಜೇನುಕಲ್ಲು ಸಿದ್ದೇಶ್ವರ ಸ್ವಾಮಿ ಹೆಸರಲ್ಲಿ ₹39 ಲಕ್ಷ ವೆಚ್ಚದ ಸ್ವಾಗತ ಹಾಗೂ ವಂದನೆ ಕಮಾನುಗಳು, ₹18 ಲಕ್ಷ ವೆಚ್ಚದಲ್ಲಿ ಗರುಡನಗಿರಿ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ₹8 ಕೋಟಿ ವೆಚ್ಚದಲ್ಲಿ ಬಿ.ಎಚ್.ರಸ್ತೆ, ಸಾಯಿನಾಥ ರಸ್ತೆ ಡಾಂಬರೀಕರಣ ಮಾಡಲಾಗಿದೆ ಎಂದು ಹೇಳಿದರು.
ಎಂಜಿನಿ ಯರಿಂಗ್, ಪಾಲಿ ಟೆಕ್ನಿಕ್ ಕಾಲೇಜು, ತರಕಾರಿ ಮಾರುಕಟ್ಟೆ , ಈಜುಕೊಳ , ಕೋರ್ಟ್ ಸೇರಿದಂತೆ ಹಲವು ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಜುಲೈ 26 ರಂದು ನೆರವೇರಿಸುವರು ಎಂದರು.
ನಗರಸಭೆ ಅಧ್ಯಕ್ಷ ಎಂ.ಸಮೀವುಲ್ಲಾ ಮಾತನಾಡಿ, ಇನ್ನಷ್ಟು ಸೌಕರ್ಯಗಳನ್ನು ಶಾಸಕರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಪಡಿಸಲಾಗುವುದು ಎಂ ದರು. ಪೌರಯುಕ್ತ ಕೃಷ್ಣಮೂರ್ತಿ , ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ , ಸ್ಥಳೀಯ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬಿ.ಎಸ್.ಅರುಣ್‌ಕುಮಾರ್ , ನಗರಸಭೆಯ ಸದಸ್ಯರು, ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.