ADVERTISEMENT

ಜಮೀನು ಸರ್ವೆ ನಡೆಸಿ, ರೈತರಿಗೆ ಅನ್ಯಾಯ ತಪ್ಪಿಸಿ: ಹಸಿರು ಸೇನೆ ಮನವಿ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 3:26 IST
Last Updated 13 ಮಾರ್ಚ್ 2021, 3:26 IST
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಕಚೇರಿಗೆ ಬಂದಿದ್ದ ರೈತ ಮುಖಂಡರು
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಕಚೇರಿಗೆ ಬಂದಿದ್ದ ರೈತ ಮುಖಂಡರು   

ಹಾಸನ: ‘ತಾಲ್ಲೂಕಿನ ದುದ್ದ ಹೋಬಳಿ ತಿಮ್ಲಾಪುರ ಗ್ರಾಮದಲ್ಲಿ ಕಾನೂನು ಪ್ರಕಾರ ಜಮೀನು ಸರ್ವೇ ನಡೆಸಿ ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಬೇಕು’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ದುದ್ದ ಹೋಬಳಿ ಘಟಕದ ರೈತರು ಶುಕ್ರವಾರ ಜಿಲ್ಲಾಧಿಕಾರಿ ಆರ್‌.ಗಿರೀಶ್‌ಗೆ ಮನವಿ ಸಲ್ಲಿಸಿದರು.

ತಿಮ್ಲಾಪುರ ಗ್ರಾಮದ ರೈತರು ಒಂದು ಎಕರೆಯಿಂದ ಮೂರು ಎಕರೆ ಜಮೀನು ಉಳ್ಳವರಾಗಿದ್ದಾರೆ. ಚಿತ್ರನಟ ಯಶ್ ಅವರ ಕುಟುಂಬದವರು ಡಾ.ಅಶೋಕ್ ಗೌಡಅವರಿಂದ ಸುಮಾರು 80 ರಿಂದ 100 ಎಕರೆಯಷ್ಟು ಜಮೀನು ಖರೀದಿಸಿದ್ದಾರೆ.ಜಮೀನಿನ ಸುತ್ತ ಕಾಂಪೌಂಡ್‌ ನಿರ್ಮಿಸಿ ರೈತರಿಗೆ ಓಡಾಡಲು ದಾರಿ ಬಂದ್‌ ಮಾಡಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಶ ಕುಟುಂಬದವರು ಗೂಂಡಾಗಳನ್ನು ಕರೆಸಿ ಗಲಾಟೆ ಮಾಡಿಸಿ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿಸಿದ್ದಾರೆ

ಸಂಬಂಧಪಟ್ಟ ಅಧಿಕಾರಿಗಳಿಂದ ಜಮೀನು ಸರ್ವೇ ನಡೆಸಿ, ರೈತರಿಗೆಅನ್ಯಾಯವಾಗದಂತೆ ಕ್ರಮಕೈಗೊಳ್ಳಬೇಕು. ಅನ್ಯಾಯ ಸರಿಪಡಿಸದಿದ್ದರೆ ಪ್ರತಿಭಟನೆಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ರೈತ ಮುಖಂಡರಾದ ರಾಜೇಗೌಡ, ಅಣ್ಣಾಜಪ್ಪ, ಈರಯ್ಯ, ತಿಮ್ಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.