ADVERTISEMENT

ಕೊಣನೂರು | ‘ತಂಬಾಕು ಬೆಳೆ ಹಾನಿ ಸಮೀಕ್ಷೆ ನಡೆಸಿ’

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 14:02 IST
Last Updated 27 ಜುಲೈ 2024, 14:02 IST
ಕೊಣನೂರು ಹೋಬಳಿಯ ಕಬ್ಬಳಿಗೆರೆಯಲ್ಲಿ ಬಿದ್ದ ಮಳೆ ನಡುವೆಯೇ ಟಾರ್ಪಲ್‌ನ ಆಶ್ರಯ ಪಡೆದು ಹೊಗೆಸೊಪ್ಪು ಮಾಲೆ ಕಟ್ಟಿದ ಮಹಿಳೆಯರು
ಕೊಣನೂರು ಹೋಬಳಿಯ ಕಬ್ಬಳಿಗೆರೆಯಲ್ಲಿ ಬಿದ್ದ ಮಳೆ ನಡುವೆಯೇ ಟಾರ್ಪಲ್‌ನ ಆಶ್ರಯ ಪಡೆದು ಹೊಗೆಸೊಪ್ಪು ಮಾಲೆ ಕಟ್ಟಿದ ಮಹಿಳೆಯರು   

ಕೊಣನೂರು: ‘ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ಎಫ್‌ಸಿವಿ ತಂಬಾಕು ಬೆಳೆ ಸಮೀಕ್ಷೆ ನಡೆಸಿ, ಬೆಳೆಗಾರರ ವಿವರವನ್ನು ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಸಲ್ಲಿಸಬೇಕು’ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಜಿ. ಬುಲ್ಲಿ ಸುಬ್ಬರಾವ್ ಸೂಚಿಸಿದ್ದಾರೆ.

‘ಮೈಸೂರು, ಹಾಸನ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಎಫ್‌ಸಿವಿ ತಂಬಾಕು ಬೆಳೆಯುತ್ತಿದ್ದು, ಈ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಬಿದ್ದಿದ್ದು, ಬೆಳೆಗೆ ಹಾನಿಯಾಗಿದೆ. ಬೆಳೆಗಾರರಿಗೆ ಪರಿಹಾರ ಬಿಡುಗಡೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕೋರಿದ್ದಾರೆ.

‘ಹೆಚ್ಚಿನ ತೇವಾಂಶ ಅಥವಾ ಮಳೆಯ ಸಂದರ್ಭದಲ್ಲಿ ತಂಬಾಕು ಕೃಷಿಯಲ್ಲಿ ಅನುಸರಿಸಬೇಕಾದ ಸುಧಾರಣಾ ಕೃಷಿ ಪದ್ಧತಿಗಳನ್ನು ಕುರಿತು ತಂಬಾಕು ಮಂಡಳಿಯ ಕ್ಷೇತ್ರ ಸಿಬ್ಬಂದಿಯು ರೈತರಿಗೆ ಅರಿವು ಮೂಡಿಸಬೇಕು’ ಎಂದು ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.