ADVERTISEMENT

ಮುಂದಿನ ಸಿ.ಎಂ ಸಿದ್ದರಾಮಯ್ಯ ಎಂದು ಘೋಷಿಸಲಿ: ಎಚ್.ಡಿ. ರೇವಣ್ಣ ಸವಾಲು

ಕಾಂಗ್ರೆಸ್‌ ಹೈಕಮಾಂಡ್‌

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 13:48 IST
Last Updated 22 ಜೂನ್ 2021, 13:48 IST
ರೇವಣ್ಣ
ರೇವಣ್ಣ   

ಹಾಸನ: ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಘೋಷಿಸಿ, ಕಾಂಗ್ರೆಸ್‌ ಪಕ್ಷವನ್ನುಬಲಿಷ್ಠಗೊಳಿಸಿ’ ಎಂದು ಶಾಸಕ ಎಚ್.ಡಿ.ರೇವಣ್ಣ ಅವರು ಕಾಂಗ್ರೆಸ್‌ ಹೈಕಮಾಂಡ್‌ಗೆ ಸವಾಲುಹಾಕಿದರು.

‘ರಾಜಕಾರಣವೇ ಬೇರೆ, ನನ್ನ ಮತ್ತು ಸಿದ್ದರಾಮಯ್ಯ ನಡುವಿನ ವಿಶ್ವಾಸವೇ ಬೇರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರೇ ಹೇಳುವಂತೆ ಜೆಡಿಎಸ್‌ಸಿದ್ದರಾಮಯ್ಯ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಈಗ ಅವರು ಕಾಂಗ್ರೆಸ್‌ನಲ್ಲಿಯೇ ಇದ್ದಾರೆ. ಮುಂದಿನ ಮುಖ್ಯಮಂತ್ರಿ ಎಂದುಘೋಷಿಸಲಿ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿದ್ದರಾಮಯ್ಯ ಸಹಕಾರ ಇಲ್ಲದಿದ್ದರೆ ಧ್ರುವನಾರಾಯಣ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಮೊದಲು ಅವರು ಸಿದ್ದರಾಮಯ್ಯ ಪರವಾಗಿದ್ದಾರೋ ಅಥವಾ ಯಾರ ಪರ ಇದ್ದಾರೆ ಎಂಬುದನ್ನುತಿಳಿಸಬೇಕು. ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಬೇಕೆಂಬ ಕಾರಣಕ್ಕೆ ‘ಕಾಂಗ್ರೆಸ್‌ ಉಳಿದಿರೋದೆಸಿದ್ದರಾಮಯ್ಯ ಅವರಿಂದ’ಎಂದು ಹೇಳಿದ್ದೇನೆ ಹೊರತು ಕಾಂಗ್ರೆಸ್‌ ಪಕ್ಷದಲ್ಲಿ ಬಿರುಕು ಮೂಡಿಸುವ ಉದ್ದೇಶದಿಂದ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ADVERTISEMENT

ತೈಲ ದರ ಏರಿಕೆ ಖಂಡಿಸಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು. ನಗರದಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿನಡೆಸಲಾಗುವುದು. ಈ ವೇಳೆ ಕೋವಿಡ್ ನಿಯಮ ಪಾಲನೆ ಮಾಡಿ ಪರಸ್ಪರ ಅಂತರಕಾಯ್ದುಕೊಳ್ಳಲಾಗುವುದು. ರಾಜ್ಯದಲ್ಲಿ ಹಲವು ಕಡೆ ಲೀಟರ್‌ ಪೆಟ್ರೋಲ್‌ ದರ ₹ 100 ಗಡಿದಾಟಿದೆ. ಡೀಸೆಲ್ ದರವೂ ಏರಿಕೆಯಾಗುತ್ತಿದೆ. ರಾಜ್ಯ ಸರ್ಕಾರ ಪ್ರತಿ ಲೀಟರ್‌ಗೆ ₹ 26 ರೂ.ಸೆಸ್‌ ವಿಧಿಸಿದರೂ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಕೋವಿಡ್‌ನಿಂದ ಜನ ಸಾಯುತ್ತಿರುವ ಸಂದರ್ಭದಲ್ಲಿ ಮೊದಲು ಜನ ಪ್ರಾಣ ಉಳಿಸುವುದು ಮುಖ್ಯವಾಗಿತ್ತು. ಹಾಗಾಗಿ ಇಷ್ಟು ದಿನ ಸುಮ್ಮನಿರಬೇಕಾಯಿತು. ನಿತ್ಯ 6 ರಿಂದ 8 ಮಂದಿಮೃತಪಡುತ್ತಿದ್ದಾರೆ. ಕೋವಿಡ್‌ ಚಿಕಿತ್ಸೆಗೆ ಖರ್ಚು ಮಾಡಿದ ಶೇಕಡಾ 50 ರಷ್ಟು ಹಣವನ್ನು ಸರ್ಕಾರ ಭರಿಸಬೇಕು.ಹಾಸನ ಹಾಲು ಒಕ್ಕೂಟ ಹಾಗೂ ಜಿಲ್ಲಾ ಸಕಾರ ಕೇಂದ್ರ ಬ್ಯಾಂಕ್ ವತಿಯಿಂದಲೂ ಬಿಪಿಎಲ್‌ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ತಿಳಿಸಿದರು.

ಡಯಾಲಿಸಿಸ್‌ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಕಂಪನಿಗೆ ನೀಡಿರುವುದರಿಂದ ಬಡವರ ರಕ್ತಹೀರುತ್ತಿದ್ದಾರೆ. ಡಯಾಲಿಸಿಸ್‌ ಮಾಡಿಸಲು ಬೇಕಾದ ಅಗತ್ಯ ಔಷಧಗಳನ್ನು ರೋಗಿಗಳೇತರಬೇಕಿದೆ. ಕೂಡಲೇ ಜಿಲ್ಲಾಡಳಿತ ಔಷಧ ಪೂರೈಸಲು ಕ್ರಮ ಕೈಗೊಳ್ಳಬೇಕು. ಗುತ್ತಿಗೆ ರದ್ದುಮಾಡಬೇಕು ಎಂದು ಒತ್ತಾಯಿಸಿದರು.

ಸಂಕಷ್ಟದಲ್ಲಿರುವ ಅಸಂಘಟಿತ ವಲಯಗಳ ಕಾರ್ಮಿಕರ ನೆರವಿಗೆ ರಾಜ್ಯ ಸರ್ಕಾರ ಘೋಷಣೆಮಾಡಿರುವ ಆರ್ಥಿಕ ಪ್ಯಾಕೇಜ್‌ ತಲುಪಿಲ್ಲ. ಅಸಂಘಟಿತ ಕಾರ್ಮಿಕರಿಗೆ ದೃಢೀಕರಣ ಪತ್ರಗಳನ್ನು ಶೀಘ್ರವೇ ನೀಡಿ ಎಲ್ಲರಿಗೂ ಪರಿಹಾರ ಹಣ ಸಿಗುವಂತೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿಮಾಡಿದ್ದೇನೆ ಹೊರತು ಯಾವುದೇ ಕಡತ ಸಹಿ ಮಾಡಿಸಿಕೊಳ್ಳಲು ಅಲ್ಲ. ಒಂದು ವೇಳೆ ವೈಯಕ್ತಿಕಅಥವಾ ರಾಜಕೀಯ ಕಾರಣಕ್ಕೆ ಸಿ.ಎಂ ಭೇಟಿ ಮಾಡಿರುವುದನ್ನು ಸಾಬೀತುಪಡಿಸಿದರೆ ರಾಜಕೀಯದಿಂದಲೇ ನಿವೃತ್ತನಾಗುವೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿಗೆ ರೇವಣ್ಣ ಸವಾಲು ಹಾಕಿದರು.

ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿದ ವೇಳೆ, ನನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಅವರಗಮನಕ್ಕೆ ತಂದು, ಮನವಿ ಪತ್ರ ಅರ್ಪಿಸಿದ್ದೇನೆ. ಹಾಸನ ವಿಮಾನ ನಿಲ್ದಾಣ ಗುತ್ತಿಗೆಯನ್ನುಇಂತವರಿಗೆ ಕೊಡಿ ಎಂದು ಹೇಳಿಲ್ಲ. ನಮ್ಮ ಬಳಿ ಯಾರೂ ಗುತ್ತಿಗೆದಾರರು ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.