ADVERTISEMENT

ಹಾಸನ | ಸ್ಫೋಟ; ಗಾಯಾಳು ದಂಪತಿ ಸಾವು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 23:19 IST
Last Updated 2 ಅಕ್ಟೋಬರ್ 2025, 23:19 IST
ಕಾವ್ಯ ಹಾಗೂ ಸುದರ್ಶನ್ 
ಕಾವ್ಯ ಹಾಗೂ ಸುದರ್ಶನ್    

ಆಲೂರು (ಹಾಸನ): ಎರಡು ದಿನಗಳ ಹಿಂದೆ ಪಟ್ಟಣದ ಬಿಕ್ಕೋಡು ರಸ್ತೆ ಮನೆಯಲ್ಲಿ ಅನುಮಾನಾಸ್ಪದ ಭೀಕರ ಸ್ಪೋಟದಿಂದ ಗಾಯಗೊಂಡಿದ್ದ ಸುದರ್ಶನ (32) ಮತ್ತು ಕಾವ್ಯ (27) ದಂಪತಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಂಗಳವಾರ ತಡರಾತ್ರಿ ಮೃತಪಟ್ಟರು.

ಸ್ಫೋಟದ ತೀವ್ರತೆಗೆ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಅಂತ್ಯಕ್ರಿಯೆ ಹಾಸನದ ಚಿತಾಗಾರದಲ್ಲಿ ನಡೆಯಿತು. ದಂಪತಿಗೆ ಹನ್ನೊಂದು ತಿಂಗಳ ಮಗು, ಪೋಷಕರು ಇದ್ದಾರೆ. ಮಾಜಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಅವರು ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT