ಹಾಸನ: ಕೊರೊನಾ ಸೋಂಕಿತೆಯೊಬ್ಬರು ಗುರುವಾರ ರಾತ್ರಿ ಜಿಲ್ಲಾಸ್ಪತ್ರೆಯಿಂದ ಹೊರಗೆ ಬಂದು ಸಮೀಪದ ಚರ್ಚ್ ಎದುರು ‘ದೇವರೇ ನನ್ನ ಉಳಿಸಪ್ಪಾ’ಎಂದು ಕಣ್ಣೀರಿಟ್ಟಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಕಣ್ತಪಿಸಿ ನಗರದ ಆರ್.ಸಿ.ರಸ್ತೆಯ ಸಿಎಸ್ಐ ವೆಸ್ಲಿ ದೇವಾಲಯ ಎದುರು ‘ಏಸುವೇ ನನ್ನ ಉಳಿಸು. ಹೇಗಾದರೂ ಮಾಡಿ ನನ್ನ ಉಳಿಸಪ್ಪ’ ಎಂದು ಮಹಿಳೆ ದೇವರಿಗೆ ಮೊರೆಯಿಟ್ಟಿದ್ದಾರೆ. ಬಳಿಕ ಕುಟುಂಬದ ಸದಸ್ಯರು ಮತ್ತು ಆಸ್ಪತ್ರೆ ಸಿಬ್ಬಂದಿ ಅವರ ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ದುರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.