ADVERTISEMENT

ಸಚಿವ ಸೋಮಣ್ಣನ ಕಾಲಿಗೆ ಬಿದ್ದ ಡಿಸಿ ಲತಾ ಕುಮಾರಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 1:36 IST
Last Updated 23 ಜೂನ್ 2025, 1:36 IST
ವಿ. ಸೋಮಣ್ಣ
ವಿ. ಸೋಮಣ್ಣ   

ಹಾಸನ: ಅರಸೀಕೆರೆ ತಾಲ್ಲೂಕಿನ ಕೋಡಿ ಮಠಕ್ಕೆ ಶನಿವಾರ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಲತಾ ಕುಮಾರಿ, ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣ ಗಳಲ್ಲಿ ಹರಿದಾಡುತ್ತಿದೆ.

ಜಿಲ್ಲಾಧಿಕಾರಿ ಅವರು ಸಚಿವರು ಬರುತ್ತಿದ್ದಂತೆಯೇ ಕಾಲಿಗೆ ಬಿದ್ದು ನಮ ಸ್ಕರಿಸಿದರು. ‘ಸರ್ ನಿಮ್ಮನ್ನು ನೋಡಿ ಖುಷಿಯಾಯಿತು. ನೀವು ನಮಗೆ ಬಹಳ ಬೇಕಾದವರು’ ಎಂದು ಹೇಳಿರುವುದು ವಿಡಿಯೊದಲ್ಲಿದೆ. ಸಸಿ ಮೊದಲಾದ ಉಡುಗೊರೆಯನ್ನೂ ಅವರುನೀಡಿದ್ದಾರೆ.

ಪ್ರತಿಕ್ರಿಯಿಸಿದ ಸಚಿವರು, ‘ನೀವು ಒಳ್ಳೆಯ ಕೆಲಸಗಾರರು. ಒಳ್ಳೆಯ ಕೆಲಸ ಮಾಡುತ್ತೀರಿ. ಯಾರ ಬಾಯಿಗೂ ಬೀಳುವುದು ಬೇಡ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.