ADVERTISEMENT

ಮರಣ ಪ್ರಕರಣ ಪರಿಶೀಲಿಸಿ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 15:24 IST
Last Updated 1 ಸೆಪ್ಟೆಂಬರ್ 2021, 15:24 IST
ಆರ್.ಗಿರೀಶ್
ಆರ್.ಗಿರೀಶ್   

ಹಾಸನ: ಮತದಾರರ ಮನೆಗಳಿಗೆ ಭೇಟಿ ನೀಡಿ ಮರಣ ಪ್ರಕರಣಗಳನ್ನು ಪರಿಗಣಿಸಿ ಕೇಂದ್ರ ಚುನಾವಣಾ
ಆಯೋಗಕ್ಕೆ ವರದಿ ಸಲ್ಲಿಸುವಂತೆ ಮತಗಟ್ಟೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಗಿರೀಶ್ ಸೂಚಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ತಹಶೀಲ್ದಾರರೊಂದಿಗೆ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಮೇಲ್ವಿಚಾರಕರು ಬಿಎಲ್‍ಓಗಳು ಮಾಡಿದ ಕೆಲಸಗಳನ್ನು ಪರಿಶೀಲಿಸಿ, ಯಾವುದೇ ಲೋಪ ದೋಷಗಳು ಕಂಡು ಬರದಂತೆ ಎಚ್ಚರವಹಿಸಬೇಕು.ಆಯೋಗಕ್ಕೆ ಯಾವುದೇ ತಪ್ಪುಗಳಿಲ್ಲದ ಮತದಾರರ ಪಟ್ಟಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ ಮಾತನಾಡಿ, ಹತ್ತಕ್ಕಿಂತ ಹೆಚ್ಚು ಮತದಾರರಿರುವಮನೆಗಳಿಗೆ ಭೇಟಿ ನೀಡಿ, ಲೋಪದೋಷಗಳು ಇಲ್ಲದ ರೀತಿಯಲ್ಲಿ ಪರಿಶೀಲಿಸಿ ವರದಿನೀಡಬೇಕು. ಜಿಲ್ಲಾ ಸಾಂಖ್ಯಿಕ ಇಲಾಖೆಯಿಂದ ಈಗಾಗಲೇ ತಾಲ್ಲೂಕುವಾರು ಮರಣ ಹೊಂದಿರುವವರವಿವರ ನೀಡಲಾಗಿದ್ದು, ಈ ಮಾರ್ಗಸೂಚಿಗಳನ್ವಯ ಸೂಕ್ತ ಕ್ರಮಕೈಗೊಳ್ಳಲುಜಿಲ್ಲೆಯ ಎಲ್ಲಾ ಸಹಾಯಕ ನೋಂದಣಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪುನೀತ್ ಕುಮಾರ್, ಉಪವಿಭಾಗಾಧಿಕಾರಿಗಳಾದ
ಬಿ.ಎ.ಜಗದೀಶ್, ಪ್ರತೀಕ್ ಬಾಯಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಆರ್. ಸಿ ಎಚ್.ಅಧಿಕಾರಿ ಡಾ. ಕಾಂತರಾಜ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.