ADVERTISEMENT

‘ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದಿಲ್ಲ’

ಎಚ್‌ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ನಾಗರಾಜ್‌ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 9:16 IST
Last Updated 21 ಆಗಸ್ಟ್ 2020, 9:16 IST
ನಾಗರಾಜ್
ನಾಗರಾಜ್   

ಹಾಸನ: ‘ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಬ್ಯಾಂಕ್‌ನಲ್ಲಿ ಯಾವುದೇ ಅವ್ಯವಹಾರ ನಡೆದಿದ್ದರೂ ಸರ್ಕಾರದ ವಿಚಾರಣೆಗೆ ಒಪ್ಪಿಸಲಾಗಿದೆ’ ಎಂದು ಬ್ಯಾಂಕ್‌ನ ಮಾಜಿ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್ ಆರೋಪಿಸಿದರು.

‘ಬಿಜೆಪಿ ಮುಖಂಡ ಬಿ.ಎಚ್.ನಾರಾಯಣಗೌಡ ಅವರು ಬ್ಯಾಂಕ್‍ನಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ನಿರಾಧಾರ ಆರೋಪ ಮಾಡಿ ಸಹಕಾರ ಸಚಿವರಿಗೆ ದೂರು ಸಲ್ಲಿಸಿದ್ದರು. 2015ರಲ್ಲೂ ಇದೇ ರೀತಿಯ ದೂರು ಸಲ್ಲಿಸಿದ್ದಾಗ ಇಲಾಖೆ ಅಧಿಕಾರಿಗಳು ಎಲ್ಲ ಆರೋಪ ಪರಿಶೀಲಿಸಿನಂತರ ಖುಲಾಸೆಗೊಳಿಸಿದ್ದಾರೆ. ಆಡಳಿತ ಮಂಡಳಿಗೆ ಕೆಟ್ಟ ಹೆಸರು ತರಬೇಕೆಂದು ನಾರಾಯಣಗೌಡ ಹೀಗೆ ಮಾಡುತ್ತಿದ್ದಾರೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವಿರುದ್ಧ ಮಾಡಿರುವ 18 ಆರೋಪಗಳಲ್ಲಿ ರಾಜ್ಯ ಸಭಾ ಸದಸ್ಯ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರಿಗೆ ₹ 20 ಕೋಟಿ ಸಾಲ ನೀಡಲಾಗಿದೆ ಎಂದಿದ್ದಾರೆ. ಆದರೆ, ಬ್ಯಾಂಕ್‍ನಿಂದ ಅವರಿಗೆ ಯಾವುದೇ ರೀತಿಯ ಸಾಲ ನೀಡಿಲ್ಲ’ ಎಂದರು.

ADVERTISEMENT

‘2019 20ನೇ ಸಾಲಿನಲ್ಲಿ ₹ 9.50 ಕೋಟಿ ಆದಾಯ ಗಳಿಸಿರುವ ಹಾಸನ ಬ್ಯಾಂಕ್ ರಾಜ್ಯದ ಎರಡನೇ ಬ್ಯಾಂಕ್ ಎಂಬ ಬಿರುದು ಪಡೆದಿದೆ. ಆರಂಭದಿಂದ ಇಲ್ಲಿವರೆಗೆ ಬ್ಯಾಂಕ್‌ನಲ್ಲಿ ಒಂದು ರೂಪಾಯಿ ಭ್ರಷ್ಟಾಚಾರ ನಡೆದಿಲ್ಲ. ₹ 1085 ರೂ. ವಹಿವಾಟು ಹೊಂದಿರುವ ಬ್ಯಾಂಕ್ 1.36 ಲಕ್ಷ ರೈತರಿಗೆ ₹6.70 ಕೋಟಿ ಸಾಲ ನೀಡಿದೆ. ₹ 375 ಕೋಟಿ ಕೃಷಿಯೇತರ ಸಾಲ ವಿತರಿಸಲಾಗಿದೆ. ಹೇಮಾವತಿ ಸಕ್ಕರೆ ಕಾರ್ಖಾನೆಗೆ ₹ 45 ಕೋಟಿ ಸಾಲ ನೀಡಲಾಗಿದೆ. ಬ್ಯಾಂಕ್ ಆಡಳಿತ ಮಂಡಳಿಯ ಎಲ್ಲ ಪದಾಧಿಕಾರಿಗಳು ಪಾರದರ್ಶಕವಾಗಿದ್ದಾರೆ’ ಎಂದರು.

‘ಕಲಂ 64 ಅನ್ವಯ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯನ್ನಾಗಿ ಬೆಂಗಳೂರಿನ ಸಹಕಾರ ಸಂಘಗಳ ಉಪನಿಬಂಧಕ ವೆಂಕಟೇಶ್ ಅವರನ್ನು ನೇಮಿಸಿದ್ದು ಮೂರು ತಿಂಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಿದೆ. ಮೇಲಧಿಕಾರಿಗಳು ನಡೆ ಸುವ ವಿಚಾರಣೆಗೆ ಬೆಂಬಲವಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಎಚ್‍ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ಮಾಜಿ ನಿರ್ದೇಶಕರಾದ ಜಯರಾಂ, ಗಿರೀಶ್ ಚನ್ನವೀರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.