ADVERTISEMENT

ಹಾಸನ | ಮನುಷ್ಯನ ಸ್ವಾರ್ಥಕ್ಕೆ ಪರಿಸರ ನಾಶ: ನ್ಯಾಯಾಧೀಶ ರವಿಕಾಂತ್ ಅಸಮಾಧಾನ

‘ಹಸಿರು ಭೂಮಿಗಾಗಿ ಹಾಡು ಕರ್ನಾಟಕ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 16:22 IST
Last Updated 11 ಮಾರ್ಚ್ 2021, 16:22 IST
ಹಾಸನದಲ್ಲಿ ಏರ್ಪಡಿಸಿದ್ದ ಹಸಿರು ಭೂಮಿಗಾಗಿ ಹಾಡು ಕರ್ನಾಟಕ ಕಾರ್ಯಕ್ರಮವನ್ನು ನ್ಯಾಯಾಧೀಶ ರವಿಕಾಂತ್‌ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಹಾಸನದಲ್ಲಿ ಏರ್ಪಡಿಸಿದ್ದ ಹಸಿರು ಭೂಮಿಗಾಗಿ ಹಾಡು ಕರ್ನಾಟಕ ಕಾರ್ಯಕ್ರಮವನ್ನು ನ್ಯಾಯಾಧೀಶ ರವಿಕಾಂತ್‌ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.   

ಹಾಸನ: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ ನಾಶ ಮಾಡುತ್ತಿದ್ದು, ಹಸಿರು ಭೂಮಿ ಅಭಿವೃದ್ಧಿ ಪಡಿಸುವುದು ಎಲ್ಲರ ಜವಾಬ್ದಾರಿ ಎಂದು ನ್ಯಾಯಾಧೀಶ ರವಿಕಾಂತ್ಹೇಳಿದರು.

ನಗರದ ಹಾಸನಾಂಬ ಕಲಾಕ್ಷೇತ್ರಲ್ಲಿ ಗುರುವಾರ ಹಸಿರು ಪ್ರತಿಷ್ಠಾನ ವತಿಯಿಂದ ‘ಹಸಿರು ಭೂಮಿಗಾಗಿ ಹಾಡು ಕರ್ನಾಟಕ’ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನೀರಿಗೆ ಬಹಳ ಹಾಹಾಕಾರ ಉಂಟಾಗುತ್ತಿದೆ. ಕುಡಿಯುವ ನೀರನ್ನುಹಣ ನೀಡಿ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ನೀರು ಮತ್ತು ಹಸಿರು ಬೇಕು.ಹಾಗಾಗಿ ಪರಿಸರ ಸಂರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ADVERTISEMENT

ದೊಡ್ಡಬಳ್ಳಾಪುರ ಸಾಂಸ್ಕೃತಿಕ ತಂಡ ಭೂಮ್ತಾಯಿ ಬಳಗದ ಸದಸ್ಯರು ಹಳ್ಳಿ ಸೊಗಡಿನ ಹಾಡಿನ ಮೂಲಕ ಸಾಮಾಜಿಕ, ಜಾಗತಿಕ, ಸಮಕಾಲೀನವಿಷಯ ಬಗ್ಗೆ ಜಾಗೃತಿ ಮೂಡಿಸಿದರು.

ಹಸಿರು ಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳು, ಪರಿಸರ ಸ್ನೇಹಿ ಸಂಘಟನೆಗಳ ಪ್ರಮುಖರು, ವಿಚಾರವಂತರು, ಸಾಹಿತಿಗಳು, ಕಲಾವಿದರು ಪಾಲ್ಗೊಂಡಿದ್ದರು.

ನಿಸರ್ಗದ ಮೇಲಿನ ದೌರ್ಜನ್ಯ ನಿಲ್ಲಿಸದಿದ್ದರೆ ಯಾವ ಜೀವಿಗಳಿಗೂ ಉಳಿಗಾಲವಿಲ್ಲ, ಕೆರೆ–ಕಟ್ಟೆ, ಜಲ ಮೂಲ ಸಂರಕ್ಷಿಸಬೇಕು, ಮಳೆಯ ನೀರೇ ಇಳೆಯ ಅಮೃತ, ಸುಸ್ಥಿರ ಬದುಕಿಗೆ ಬೇಕು ಅರಣ್ಯ ಎಂಬುದನ್ನು ಗಾಯನದ ಮೂಲಕ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನ ಸಂಸ್ಥೆ ಅಧ್ಯಕ್ಷ ಪುಟ್ಟಯ್ಯ, ಶಿವಸ್ವಾಮಿ, ರಾಜೇಗೌಡ, ಪ್ರಸೂತಿ ತಜ್ಞೆ ಡಾ. ಸಾವಿತ್ರಿ, ಮಮತಾ ಪ್ರಭು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ, ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಎಚ್. ಎಲ್ ನಾಗರಾಜ್, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಂ .ಶಿವಣ್ಣ, ಅಹಮದ್ ಹಗರೆ ಆಸರೆಫೌಂಡೇಶನ್‌ ಗೌರವಾಧ್ಯಕ್ಷ ಬಿ. ಆರ್. ಉದಯ ಕುಮಾರ್, ಜಿಲ್ಲಾ ಗೈಡ್ಸ್ ಆಯುಕ್ತೆ ಕಾಂಚನ ಮಾಲಾ, ವಕೀಲೆ ಗಿರಿಜಾಂಬಿಕ, ಚಿನ್ನೇನ ಹಳ್ಳಿ ಸ್ವಾಮಿ, ಭಾರತ ಸೇವಾ ದಳದವಿ.ಎಸ್ ರಾಣಿ, ಕಲಾವಿದ ಗ್ಯಾರಂಟಿ ರಾಮಣ್ಣ, ವೆಂಕಟೇಶ ಮೂರ್ತಿ ಇದ್ದರು.

ನೆಲ, ಜಲ, ಜನ ಜಾಗೃತಿ ಗೀತೆ ಹಾಡಿದ ಭೂಮ್ತಾಯಿ ಬಳಗದ ನಿರ್ಮಲಾ ಮತ್ತುತಂಡದ ಕಲಾವಿದರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.