ADVERTISEMENT

ಗಂಗಾಕಲ್ಯಾಣ ಫಲಾನುಭವಿ ಖಾತೆಗೆ ನೇರ ಹಣ: ಕೋಟಾ ಶ್ರೀನಿವಾಸ ಪೂಜಾರಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 15:44 IST
Last Updated 2 ಫೆಬ್ರುವರಿ 2022, 15:44 IST
 ಕೋಟಾ ಶ್ರೀನಿವಾಸ ಪೂಜಾರಿ
 ಕೋಟಾ ಶ್ರೀನಿವಾಸ ಪೂಜಾರಿ   

ಹಾಸನ: ‘ಗಂಗಾ ಕಲ್ಯಾಣ ಯೋಜನೆ ವಿಳಂಬ ತಪ್ಪಿಸಲು ಫಲಾನುಭವಿಗಳ ಖಾತೆಗೆ ಹಣಜಮಾ ಮಾಡಲು ಶೀಘ್ರದಲ್ಲೇ ಯೋಜನೆ ರೂಪಿಸಲಾಗುವುದು ಎಂದು ಸಮಾಜ ಕಲ್ಯಾಣಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

‘ಹಾಲಿ ನೀಡಲಾಗಿರುವ ಗುರಿ ಕಡಿಮೆ ಸಂಖ್ಯೆಯಲ್ಲಿದ್ದು, ಶೀಘ್ರವೇ ಒಂದೊಂದು ಕ್ಷೇತ್ರಗಳಿಗೂ ಕನಿಷ್ಠ 20 ಕೊಳವೆ ಬಾವಿಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು.ಗಂಗಾ ಕಲ್ಯಾಣ ಯೋಜನೆ ಕಾಮಗಾರಿ ಗುತ್ತಿಗೆ ಪಡೆದವರ ವಿರುದ್ಧ ಗುತ್ತಿಗೆ ಸಿಗದವರುನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದರು. ಇತ್ಯಾದಿ ತೊಡಕುಗಳಿಂದವಿಳಂಬವಾಗುತ್ತಿತ್ತು. ಅದನ್ನು ತಪ್ಪಿಸಲು ಗುತ್ತಿಗೆ ಬದಲು ಫಲಾನುಭವಿಗೆ ಹಣಒದಗಿಸುವುದರಿಂದ ವಿಳಂಬ ತಪ್ಪುತ್ತದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

‘ಮೈಸೂರು, ಹಾಸನ, ಮಂಗಳೂರು ಮತ್ತು ಬೆಳಗಾವಿಯಲ್ಲಿ ಹಾಸ್ಟೆಲ್‍ಗಳ ಕೊರತೆ ಇದೆ.ಮೆಟ್ರಿಕ್ ಪೂರ್ವಕ್ಕಿಂತ ಮೆಟ್ರಿಕ್ ನಂತರದ ಹಾಸ್ಟೆಲ್ ಸಮಸ್ಯೆ ಹೆಚ್ಚಿದೆ. ಹೀಗಾಗಿ ನಗರಪ್ರದೇಶಗಳಲ್ಲಿ ಬಾಡಿಗೆ ಕಟ್ಟಡ ಪಡೆದು ಸೌಕರ್ಯ ಒದಗಿಸಲಾಗುವುದು. ಹಾಸನಕ್ಷೇತ್ರದಲ್ಲೂ ಆರು ಹಾಸ್ಟೆಲ್‌ಗೆ ಅನುಮತಿ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.‌

ADVERTISEMENT

‘ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು ಎಂಬ ಕಾರಣದಿಂದ ಪಾರದರ್ಶಕ ಟೆಂಡರ್‌ಗೆ ಅವಕಾಶ ಕಲ್ಪಿಸಿದೆ. ಒಂದು ವೇಳೆ ಕಳಪೆ ಆಹಾರ ನೀಡುವಂತ ವ್ಯವಸ್ಥೆ ಕಂಡು ಬಂದಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಸಿದರು.

‘ಕೇಂದ್ರ ಸರ್ಕಾರ ಮುಂದಿನ 25 ವರ್ಷ ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಿದೆಕೃಷಿ, ರೈಲ್ವೆ, ತಂತ್ರಜ್ಞಾನ ಹೊಂದಿದ ಅಪೂರ್ವ ಬಜೆಟ್ ಮಂಡನೆ ಮಾಡಿದ್ದಾರೆ. ರಾಜ್ಯ ಬಜೆಟ್ ಬಗ್ಗೆ ಚರ್ಚೆ ಮಾಡಲು ಮುಖ್ಯಮಂತ್ರಿ ಫೆ. 7ರ ಬಳಿಕ ಸಭೆ ನಡೆಸುವರು. ಈ ವೇಳೆ ಹೊಸ ಯೋಜನೆ ಬಗ್ಗೆ ಚರ್ಚೆ ಮಾಡಲಾಗುವುದು’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಭಿಕ್ಷುಕರಿಗೆ ನೆಲೆ ಒದಗಿಸಲು 18 ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ.ಅಲೆಮಾರಿಗಳಿಗೆ ಸೂರು ಒದಗಿಸಲು ₹ 250 ಕೋಟಿ ನೀಡಲಾಗಿದೆ’ ಎಂದುಹೇಳಿದರು.

ಹಾಸನದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಕ್ರಮದಬಗ್ಗೆ ಜಿಲ್ಲಾಧಿಕಾರಿ ತನಿಖೆ ನಡೆಸುತ್ತಿದ್ದಾರೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಶಾಸಕ ಪ್ರೀತಂ ಜೆ.ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.