ADVERTISEMENT

ಪರೀಕ್ಷೆ ಭಯ ಬೇಡ, ಹಬ್ಬದಂತೆ ಸಂಭ್ರಮಿಸಿ: ಡಿಡಿಪಿಐ

‘ಪ್ರಜಾವಾಣಿ’ಫೋನ್‌ –ಇನ್‌ನಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿದ ಡಿಡಿಪಿಐ ಪ್ರಕಾಶ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 15:45 IST
Last Updated 21 ಮಾರ್ಚ್ 2022, 15:45 IST
 ಕೆ.ಎಸ್.ಪ್ರಕಾಶ್
 ಕೆ.ಎಸ್.ಪ್ರಕಾಶ್   

ಹಾಸನ: ‘ಪರೀಕ್ಷೆ ಭಯ ಬಿಟ್ಟು ಬಿಡಿ, ಹಬ್ಬದಂತೆ ಸಂಭ್ರಮಿಸಿ.ಭಯಪಟ್ಟರೆ ಓದಿರುವುದು ಮರೆತು ಹೋಗುತ್ತದೆ. ಗೊಂದಲ ಇದ್ದರೆ ಶಿಕ್ಷಕರನ್ನುಸಂಪರ್ಕಿಸಿ..’

‘ಪ್ರಜಾವಾಣಿ’ ಕಚೇರಿಯಲ್ಲಿ ಸೋಮವಾರ ನಡೆದ ಫೋನ್‌ ಇನ್‌ಗೆಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಪೋಷಕರಿಂದ ಬಂದ ಫೋನ್ ಕರೆಗೆ ಸಾರ್ವಜನಿಕಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್.ಪ್ರಕಾಶ್ ಅವರು ಉತ್ತರದ ಜತೆಗೆ
ಆತ್ಮಸ್ಥೈರ್ಯ ತುಂಬಿದರು.

ಜಿಲ್ಲೆಯ ವಿವಿಧೆಡೆಯಿಂದ ಕರೆ ಮಾಡಿದ ವಿದ್ಯಾರ್ಥಿಗಳ ಪ್ರಶ್ನೆಗೆಸಮಾಧಾನದಿಂದಲೇ ಉತ್ತರಿಸಿದರು.

ADVERTISEMENT

‘ಪರೀಕ್ಷೆ ಎಂಬುದು ಯುದ್ದವಲ್ಲ. ಅದೊಂದು ಹಬ್ಬದಂತೆ ಸಂಭ್ರಮಿಸಬೇಕು.ಓದಿದನ್ನು ಅರ್ಥಮಾಡಿಕೊಳ್ಳಬೇಕು. ಓದಿದ್ದನ್ನು ಮಲಗುವ ಮನ್ನ ಮತ್ತೊಮ್ಮೆನೆನಪು ಮಾಡಿಕೊಳ್ಳಬೇಕು. ಗೊಂದಲ, ಸಮಸ್ಯೆ ಇದ್ದರೆ ಶಿಕ್ಷಕರನ್ನು ಸಂಪರ್ಕಿಸಿಮಾರ್ಗದರ್ಶನ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಚ್ 28 ರಿಂದ ಏ.11ರ ವರೆಗೆ ಮುಖ್ಯಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ ವಿದ್ಯಾರ್ಥಿಗಳು ಪರೀಕ್ಷೆಗೆಸಿದ್ದರಾಗಬೇಕು. ಪಠ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಷ್ಟೇ ಇರಲಿವೆ. ಕೊರೊನಾ
ಸೋಂಕು ಕಡಿಮೆಯಾಗಿದೆ. ಆತಂಕ ಪಡುವ ಅಗತ್ಯವಿಲ್ಲ’ ಎಂದುತಿಳಿಸಿದರು.

‘ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ಮಾಸ್ಕ್‌, ಸ್ಯಾನಿಟೈಸರ್ನೀಡುವುದಿಲ್ಲ. ಪರೀಕ್ಷಾ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಲುಸೂಚಿಸಲಾಗಿದೆ. ಪ್ರತಿ ಕೇಂದ್ರಕ್ಕೆ ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿನಿಯೋಜಿಸಲಾಗುವುದು. ವಿದ್ಯಾರ್ಥಿಗಳೇ ಮಾಸ್ಕ್‌ ತರಬೇಕು.ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಆದರೆ, ಮನೆಯಿಂದಲೇ ನೀರು
ತರುವುದು ಒಳ್ಳೆಯದು. ಕೊರೊನಾ ಸೋಂಕಿತ ಮಕ್ಕಳಿಗೆ ಕೋವಿಡ್‌ ಕೇರ್ಕೇಂದ್ರದಲ್ಲಿ ಪ್ರತ್ಯಕೇವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆಮಾಡಿಕೊಳ್ಳಲಾಗಿದೆ’ಎಂದು ಮಾಹಿತಿ ನೀಡಿದರು.

‘ಉತ್ತಮ ಫಲಿತಾಂಶಕ್ಕಾಗಿ ಶಾಲಾ ಹಂತದಲ್ಲಿ 36 ಅಂಶಗಳ ಕಾರ್ಯಕ್ರಮರೂಪಿಸಿ, ಅಕ್ಟೋಬರ್‌ನಲ್ಲಿಯೇ ಎಲ್ಲಾ ಶಾಲೆಗಳ ಮುಖ್ಯಶಿಕ್ಷಕರ ಸಭೆ ನಡೆಸಿ,ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ. ತಾಯಂದಿರ ಸಭೆ,
ಕಡಿಮೆ ಫಲಿತಾಂಶ ಪಡೆದ ಶಾಲೆ ಗುರುತಿಸಿ ಅಧಿಕಾರಿಗಳಿಗೆ ದತ್ತುನೀಡಲಾಗಿದೆ. ಅಧಿಕಾರಿಗಳ ಆಗಾಗ್ಗೆ ಭೇಟಿ ನೀಡಿ ಮಾರ್ಗದರ್ಶನನೀಡಿದ್ದಾರೆ’ ಎಂದರು.

‘ಕಲಿಕೆಯಲ್ಲಿ ಹಿಂದುಳಿದ ಮಕ್ಕಳ, ಕಡಿಮೆ ಫಲಿತಾಂಶವಿರುವ ಶಾಲೆಗಳನ್ನುಗುರುತಿಸಿ ಪಟ್ಟಿ ಮಾಡಿದ್ದು, ಸುಧಾರಣೆಗಾಗಿ ಶಾಲಾ ದತ್ತು ಯೋಜನೆಅನುಷ್ಠಾನಗೊಳಿಸಲಾಗಿದೆ. ಇಲಾಖೆ ಅಧಿಕಾರಿಗಳು ವಾರದಲ್ಲಿ ಎರಡು ದಿನ ಕಡ್ಡಾಯವಾಗಿ ಶಾಲೆಗೆ ಹೋಗಿ ಉತ್ತಮ ಫಲಿತಾಂಶಕ್ಕೆ ಯತ್ನಿಸುತ್ತಿದ್ದಾರೆ. ನಿತ್ಯವಿಶೇಷ ತರಗತಿ, ಗುಂಪು ಅಧ್ಯಯನ, ಚರ್ಚಾ ಸ್ಪರ್ಧೆ, ಕಂಠ ಪಾಠ ಸ್ಪರ್ಧೆ,ಚಿತ್ರಕಲೆ ಸ್ಪರ್ಧೆ. ರಸಪ್ರಶ್ನೆ ಸ್ಪರ್ಧೆ ಸೇರಿದಂತೆ ಇತರೆ ಚಟುವಟಿಕೆಗಳನ್ನು
ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

‘ಈಗಾಗಲೇ ಪ‍ಠಪಠ್ಯ ಬೋಧನೆ ಪೂರ್ಣಗೊಂಡಿದ್ದು, ಎಂಟು ಸೆಟ್‌ ಮಾದರಿ ಪ್ರಶ್ನೆಪತ್ರಿಕೆಗಳನ್ನು ಶಾಲೆಗಳಿಗೆ ಕಳುಹಿಸಲಾಗಿದೆ. ಮಕ್ಕಳ ಕಲಿಕೆ, ಬೋಧನೆ ಬಗ್ಗೆನಿಗಾ ವಹಿಸಲಾಗಿದೆ. ಶೇಕಡಾ 30ಕ್ಕಿಂತ ಕಡಿಮೆ ಅಂಕ ಗಳಿಸುವವರಿಗೆಪಾಸಿಂಗ್ ಪ್ಯಾಕೇಜ್ ರೂಪಿಸಲಾಗಿದೆ. ಉಹಾಪೋಹಕ್ಕೆ ಕಿವಿಗೊಡದೆ ಪರೀಕ್ಷೆಗೆ
ಸಿದ್ಧರಾಗಬೇಕು’ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಧನಂಜಯ್ಜತೆಯಲ್ಲಿದ್ದರು.

ನಿರ್ವಹಣೆ: ಕೆ.ಎಸ್‌.ಸುನಿಲ್, ಜೆ.ಎಸ್.ಮಹೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.