ADVERTISEMENT

ಕಾಡಾನೆ ದಾಳಿ: ಕಾರ್ಮಿಕ ಗಾಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 1:35 IST
Last Updated 11 ಫೆಬ್ರುವರಿ 2021, 1:35 IST

ಸಕಲೇಶಪುರ: ಕಾಡಾನೆ ದಾಳಿಯಿಂದ ತೋಟದ ಕಾರ್ಮಿಕ ಗಂಭೀರ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಹಲಸುಲಿಗೆ ಗ್ರಾಮದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ.

ಕೊಯ್ಲು ಮಾಡಿದ್ದ ಕಾಫಿ ತುಂಬಿಕೊಂಡು ಬರಲು ಇತರ ಕಾರ್ಮಿಕರೊಂದಿಗೆ ಮಂಜುನಾಥ್ ತೋಟಕ್ಕೆ ಹೋಗಿದ್ದಾಗ ಕಾಡಾನೆ ಏಕಾಏಕಿ ನುಗ್ಗಿ ಕೋರೆಯಿಂದ ಹಿಂಭಾಗಕ್ಕೆ ತಿವಿದು ಸುಮಾರು 10 ಅಡಿ ದೂರಕ್ಕೆ ಎಸೆದಿದೆ.

‘ಕಾಡಾನೆ ಕಂಡು ಜೀವ ಉಳಿಸಿಕೊಳ್ಳಲು ಎಲ್ಲರೂ ದಿಕ್ಕಾಪಾಲಾಗಿ ಓಡಿ ಹೋದೆವು. ಕೆಲವೇ ಸೆಕೆಂಡುಗಳಲ್ಲಿ ಏನಾಯಿತು, ಯಾರ ಮೇಲೆ ದಾಳಿ ಮಾಡಿತು ಎಂಬುದು ಗೊತ್ತಾಗಲಿಲ್ಲ. ದಾಳಿಗೆ ಸಿಕ್ಕಿ ಗಾಯಗೊಂಡಿದ್ದ ವಸಂತ ಅವರಿಗೆ ಪಟ್ಟಣದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ’ ಎಂದು ತೋಟದ ಮಾಲೀಕ ಮಂಜುನಾಥ್ ಹೇಳಿದರು.

ADVERTISEMENT

ಸುಮಾರು 26 ಕಾಡಾನೆಗಳು ಹಲಸುಲಿಗೆ ಗ್ರಾಮದ ಕಾಫಿ ತೋಟಗಳಲ್ಲಿಯೇ ಬೀಡು ಬಿಟ್ಟು, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿ ಹಾನಿ ಮಾಡಿವೆ ಎಂದು ರೈತರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.