ADVERTISEMENT

ಸಕಲೇಶಪುರ: ನಿತ್ರಾಣಗೊಂಡ ಕಾಡಾನೆ 'ಕಾಂತಿ' ಸಾವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2023, 12:23 IST
Last Updated 1 ಜುಲೈ 2023, 12:23 IST
ಸಕಲೇಶಪುರ ತಾಲ್ಲೂಕಿನ ಮಠಸಾಗರ ಬಳಿ ನಿತ್ರಾಣಗೊಂಡು ಮಲಗಿದ್ದ ಕಾಡಾನೆ ಕಾಂತಿ
ಸಕಲೇಶಪುರ ತಾಲ್ಲೂಕಿನ ಮಠಸಾಗರ ಬಳಿ ನಿತ್ರಾಣಗೊಂಡು ಮಲಗಿದ್ದ ಕಾಡಾನೆ ಕಾಂತಿ   

ಸಕಲೇಶಪುರ: ತಾಲ್ಲೂಕಿನ ಮಠಸಾಗರ ಸಮೀಪ ಗುಂಪಿನಿಂದ ಬೇರ್ಪಟ್ಟು ನಿತ್ರಾಣಗೊಂಡ ಕಾಡಾನೆ ಮೃತಪಟ್ಟಿದೆ.

21 ಕಾಡಾನೆಗಳ ಗುಂಪಿನಲ್ಲಿದ್ದ 'ಕಾಂತಿ' ಎಂಬ ಹೆಸರಿನ ಆನೆ ಹಿಂಡಿನಿಂದ ಬೇರ್ಪಟ್ಟಿತ್ತು. ಐಬಿಸಿ ಕಾಫಿ ಎಸ್ಟೇಟ್‌ನಲ್ಲಿರುವ ನೀರಿನ ಹಳ್ಳದ ಬಳಿ ನೀರು ಕುಡಿಯಲು ಬಂದಾಗ, ನಿತ್ರಾಣಗೊಂಡು ಮಲಗಿತ್ತು.

ಇಟಿಎಫ್ ಮತ್ತು ಆರ್‌ಆರ್‌ಟಿ ಸಿಬ್ಬಂದಿ ಇದನ್ನು ಗಮನಿಸಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆನೆಗೆ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದೆ.

ADVERTISEMENT

ಇತ್ತೀಚೆಗಷ್ಟೇ ಮರಿ ಆನೆಗೆ ಜನ್ಮ ನೀಡಿದ್ದ ಕಾಂತಿ, 21 ಕಾಡಾನೆಗಳ ಗುಂಪಿನ ನೇತೃತ್ವ ವಹಿಸಿತ್ತು. ಸಕಲೇಶಪುರ, ಆಲೂರು ಭಾಗದಲ್ಲಿ ಸಂಚಾರ ನಡೆಸುತ್ತಿತ್ತು. ಕಾಡಾನೆಗಳ ಗುಂಪಿನ ಚಲನವಲನ ಗಮನಿಸಲು ಅರಣ್ಯ ಇಲಾಖೆಯಿಂದ ಈಚೆಗೆ ಕಾಂತಿಗೆ ರೆಡಿಯೋ ಕಾಲರ್‌ ಅಳವಡಿಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.