ADVERTISEMENT

ಹಾಸನ: ಸೇವೆ ಕಾಯಂಗೊಳಿಸಲು ನೌಕರರ ಆಗ್ರಹ

ಗ್ರಾಮೀಣ ಅಂಚೆ ಅಧೀಕ್ಷಕರ ಕಚೇರಿ ಎದುರು ಧರಣಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2020, 14:52 IST
Last Updated 26 ನವೆಂಬರ್ 2020, 14:52 IST
ಹಾಸನದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಧರಣಿ ನಡೆಸಲಾಯಿತು.
ಹಾಸನದಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಧರಣಿ ನಡೆಸಲಾಯಿತು.   

ಹಾಸನ: ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ವತಿಯಿಂದ ಗುರುವಾರ ಧರಣಿ ನಡೆಸಲಾಯಿತು.

7ನೇ ವೇತನ ಆಯೋಗದ ಪ್ರಕಾರ ಕಮಲೇಶ್‌ ಚಂದ್ರ ಅವರ ವರದಿ ಜಾರಿಗೊಳಿಸಬೇಕು. ಬಡ್ತಿ ಪ್ರಕ್ರಿಯೆ,
ಸಿಂಗಲ್‌ ಹ್ಯಾಂಡ್‌ ಶಾಖಾ ಅಂಚೆ ಕಚೇರಿ ಹುದ್ದೆ (ಸಿ.ಡಿ.ಎ)ಗೆ ಜಾರಿಗೊಳಿಸಬೇಕು. ಗ್ರೂಪ್‌ ವಿಮಾ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ಅವೈಜ್ಞಾನಿಕ ಗುರಿ ನಿಗದಿ ನಿಲ್ಲಿಸಬೇಕು. ಕೋವಿಡ್‌ನಿಂದ ಮರಣ ಹೊಂದಿದ ಗ್ರಾಮೀಣ ಅಂಚೆ ನೌಕರರಿಗೆ ಕನಿಷ್ಟ ₹20 ಲಕ್ಷ ಪರಿಹಾರ ನೀಡಬೇಕು. ಸೇವಾ ಅವಧಿಯನ್ನು 5 ಗಂಟೆಯಿಂದ 8 ಗಂಟೆ ವರೆಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಹಾಸನ ವಿಭಾಗದ ಅಂಚೆ ಅಧೀಕ್ಷಕರಿಗೆ ಮನವಿ ಸಲ್ಲಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ಕಾರ್ಯದರ್ಶಿ ಬಿ.ವೈ. ತಾರಾನಾಥ, ಉಪಕಾರ್ಯದರ್ಶಿ ಎಚ್‌.ವಿ. ಆನಂದ್‌, ಸಹಾಯಕ ಕಾರ್ಯದರ್ಶಿ ಬಿ.ಆರ್‌. ಜಗದೀಶ್‌, ಹಾಸನ ಗೌರವಾಧ್ಯಕ್ಷ ಶ್ರೀವತ್ಸ, ಸಂಘಟನಾ ಕಾರ್ಯದರ್ಶಿ ಬಿ.ಸಿ. ಮಂಜುನಾಥ್‌, ಮಹಿಳಾ ಕಾರ್ಯದರ್ಶಿಗಳಾದ ಯಾಸ್ಮಿನ್‌ ತಾಜ್‌, ಶಶಿಕಲಾ, ಶೃತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.