ADVERTISEMENT

ಎಂಜಿನಿಯರಿಂಗ್‌ ಮಾಡುವ ಆಸೆ: ಸಿಇಟಿ 3ನೇ ರ್‍ಯಾಂಕ್‌ ಪಡೆದ ಶ್ರೀಕಾಂತ್‌

​ಪ್ರಜಾವಾಣಿ ವಾರ್ತೆ
Published 25 ಮೇ 2019, 14:38 IST
Last Updated 25 ಮೇ 2019, 14:38 IST
ಸಿಇಟಿ ಫಲಿತಾಂಶದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 3 ನೇ ರ್‍ಯಾಂಕ್‌ ಪಡೆದ ಹಾಸನದ ಮಾಸ್ಟರ್‌ ಕಾಲೇಜು ವಿದ್ಯಾರ್ಥಿ ಶ್ರೀಕಾಂತ್‌ಗೆ ಸಿಹಿ ತಿನಿಸಿದ ಉಪನ್ಯಾಸಕರು.
ಸಿಇಟಿ ಫಲಿತಾಂಶದಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 3 ನೇ ರ್‍ಯಾಂಕ್‌ ಪಡೆದ ಹಾಸನದ ಮಾಸ್ಟರ್‌ ಕಾಲೇಜು ವಿದ್ಯಾರ್ಥಿ ಶ್ರೀಕಾಂತ್‌ಗೆ ಸಿಹಿ ತಿನಿಸಿದ ಉಪನ್ಯಾಸಕರು.   

ಹಾಸನ: ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ ( ಸಿಇಟಿ) ಫಲಿತಾಂಶದಲ್ಲಿ ನಗರದ ಶ್ರೀಕಾಂತ್ ಬಿಎಸ್ಸಿ ಅಗ್ರಿಕಲ್ಚರ್ ವಿಭಾಗದಲ್ಲಿ 3 ನೇ ರ್‍ಯಾಂಕ್‌ ಪಡೆದಿದ್ದಾರೆ.

ಮಾಸ್ಟರ್ಸ್ ಕಾಲೇಜು ವಿದ್ಯಾರ್ಥಿ ಶ್ರೀಕಾಂತ್ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

‘ನನ್ನ ಶ್ರಮಕ್ಕೆ ಒಳ್ಳಯೆ ಪ್ರತಿಫಲ ಸಿಕ್ಕಿದೆ. ನೀಟ್ ಪರೀಕ್ಷೆ ಫಲಿತಾಂಶಕ್ಕೂ ಎದುರು ನೋಡುತ್ತಿದ್ದಾನೆ. ಎಂಜಿನಿಯರಿಂಗ್ ಮಾಡುವ ಆಸೆ ಇದೆ’ ಎಂದು ಶ್ರೀಕಾಂತ್‌ ತಿಳಿಸಿದರು.

ADVERTISEMENT

ಶ್ರೀಕಾಂತ್‌ ಸಹೋದರಿ ಎರಡು ವರ್ಷಗಳ ಹಿಂದೆ 6000 ರ್‍ಯಾಂಕ್‌ ಪಡೆದು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇವರ ತಂದೆ ಕೃಷಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.