ಸಾವು
ಪ್ರಾತಿನಿಧಿಕ ಚಿತ್ರ
ಕೊಣನೂರು: ಕೌಟುಂಬಿಕ ಕಲಹದಿಂದಾಗಿ ರಾಮನಾಥಪುರದಲ್ಲಿ ಅತ್ತೆಯನ್ನು ಅಳಿಯನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ.
ರಾಮನಾಥಪುರದ ಮಸೀದಿ ಬಳಿಯ ನಿವಾಸಿ ಜಹೀರ್ ಅಹಮದ್ ಅವರ ಪತ್ನಿ ಫೈರೋಜಾ ಬಾನು (55) ಕೊಲೆಯಾದ ಮಹಿಳೆ.
ಫೈರೂಜಾ ಬಾನು ಅಳಿಯ, ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ರಸೂಲ್ ಗುರುವಾರ ಸಂಜೆ 6.15 ಕ್ಕೆ ರಾಮನಾಥಪುರದ ಅತ್ತೆಯ ಮನೆಗೆ ಬಂದಿದ್ದ. ಈ ವೇಳೆ ಅತ್ತೆ ಫೈರೋಜಾ ಬಾನು ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ತನ್ನ ಪತ್ನಿ ಸಮೀನಾ ಬಾನು ಕುತ್ತಿಗೆಯ ಭಾಗಕ್ಕೂ ಇರಿದಿದ್ದು, ಅತ್ತಿಗೆ ಸುಮಯಾ ಬಾನು ಬೆರಳುಗಳಿಗೆ ಗಾಯವಾಗಿದೆ.
ಸಮೀನಾ ಬಾನುರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕಳುಹಿಸಲಾಗಿದೆ. ರಸೂಲ್ ತನ್ನ ಹೆಂಡತಿಯ ಬಗ್ಗೆ ಅನುಮಾನ ಪಡುತ್ತಿದ್ದು, ಆಗಾಗ ಈ ವಿಷಯದಲ್ಲಿ ಜಗಳಮಾಡುತ್ತಿದ್ದ. ಮೃತ ಫೈರೋಜಾ ಬಾನು ಅವರಿಗೆ ಪತಿ ಜಹೀರ್ ಅಹಮದ್, 2 ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಕತಾರ್‌ನಲ್ಲಿದ್ದಾನೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಣನೂರು ಆಸ್ಪತ್ರೆಯಲ್ಲಿ ರವಾನಿಸಲಾಗಿದೆ.
ಮೇಲ್ಚಾವಣಿಯಿಂದ ಬಿದ್ದು ಕಾರ್ಮಿಕ ಸಾವು
ಕೊಣನೂರು: ಸಮೀಪದ ರಾಮನಾಥಪುರದಲ್ಲಿ ಕಾಲು ಜಾರಿ ಮೇಲ್ಚಾವಣಿಯಿಂದ ಬಿದ್ದು ಉತ್ತರ ಪ್ರದೇಶ ಮೂಲಕ ಕಾರ್ಮಿಕ ಅಬ್ಬಾಸ್ ಅಲಿ (32) ಮೃತಪಟ್ಟಿದ್ದಾನೆ.
ಗುರುವಾರ ಬೆಳಿಗ್ಗೆ ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ಮೇಲ್ಚಾವಣೆಗೆ ಶೀಟ್ ಹಾಕುತ್ತಿದ್ದ ಅಬ್ಬಾಸ್ ಅಲಿ, ಅಕಸ್ಮಿಕವಾಗಿ ಸಿಮೆಂಟ್ ಶೀಟ್‌ನ ಮೇಲೆ ಕಾಲಿಟ್ಟ ವೇಳೆ, ಶೀಟ್ ಮುರಿದು ಕೆಳಗೆ ಬಿದ್ದಿದ್ದು, ಚಿಕಿತ್ಸೆಗಾಗಿ ಕೊಣನೂರಿನ ಸಮುದಾಯ ಆರೊಗ್ಯ ಕೇಂದ್ರಕ್ಕೆ ಕರೆತರುವ ದಾರಿ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.