ADVERTISEMENT

ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ: ಜೆಡಿಎಸ್‌ನ 8 ಮುಖಂಡರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 26 ಮೇ 2020, 16:36 IST
Last Updated 26 ಮೇ 2020, 16:36 IST
ಹಾಸನದ ಹೊಸಲೈನ್‌ ರಸ್ತೆಯಲ್ಲಿ ಜೆಡಿಎಸ್ ಮುಖಂಡ ಅಗಿಲೇ ಯೋಗೇಶ್‌ ನೇತೃತ್ವದಲ್ಲಿ ರಸ್ತೆಯಲ್ಲಿ ಜೋಳ ಬಿತ್ತನೆ ಮಾಡಲು ತಂದಿದ್ದ ನಾಲ್ಕು ಎತ್ತುಗಳನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ವಶಪಡಿಸಿಕೊಂಡರು
ಹಾಸನದ ಹೊಸಲೈನ್‌ ರಸ್ತೆಯಲ್ಲಿ ಜೆಡಿಎಸ್ ಮುಖಂಡ ಅಗಿಲೇ ಯೋಗೇಶ್‌ ನೇತೃತ್ವದಲ್ಲಿ ರಸ್ತೆಯಲ್ಲಿ ಜೋಳ ಬಿತ್ತನೆ ಮಾಡಲು ತಂದಿದ್ದ ನಾಲ್ಕು ಎತ್ತುಗಳನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ವಶಪಡಿಸಿಕೊಂಡರು   

ಹಾಸನ: ಕೊರೊನಾ ಲಾಕ್‌ಡೌನ್ ಹಿನ್ನೆಲೆ ಜಿಲ್ಲೆಯಾದ್ಯಂತ ಜಾರಿಯಲ್ಲಿರುವ ನಿಷೇಧಾಜ್ಞೆಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕಾರಣ ಜೆಡಿಎಸ್ ಮುಖಂಡ ಅಗಿಲೇ ಯೋಗೇಶ್‌ ಸೇರಿದಂತೆ 8 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಮಂಗಳವಾರ ಬೆಳಿಗ್ಗೆ ಅಗಿಲೇ ಯೋಗೇಶ್ ಅವರು ನಗರದ ಪೆನ್ಷನ್‌ ಮೊಹಲ್ಲಾದಹೊಸಲೈನ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಲುಮುಂದಾದರು. ಅಮೃತ್‌ ಯೋಜನೆ ಪೈಪ್‌ಲೈನ್ ಅಳವಡಿಸಲು ರಸ್ತೆಗಳನ್ನು ಅಗೆದು ಮಣ್ಣು ಮುಚ್ಚಲಾಗಿದೆ. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಗುಂಡಿ ಮುಚ್ಚಿಸಬೇಕು ಎಂದು ಆಗ್ರಹಿಸಿ ಎತ್ತುಗಳನ್ನು ತಂದು ರಸ್ತೆಯಲ್ಲಿಯೇ ಉಳುಮೆ ಮಾಡಿ ಜೋಳ ಬಿತ್ತನೆ ಮಾಡುತ್ತಿದ್ದರು.

ಪೆನ್ಷನ್‌ ಮೊಹಲ್ಲಾಪೊಲೀಸ್‌ ಠಾಣೆ ಎದುರಿನ ರಸ್ತೆಯಲ್ಲಿಯೇ ಜೋಳ ಬಿತ್ತನೆ ಮಾಡಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೆನ್ಷನ್‌ ಮೊಹಲ್ಲಾಠಾಣೆಯ ಪಿಎಸ್‌ಐ ರಾಜನಾಯ್ಕ ಅವರು ಪ್ರತಿಭಟನಾಕಾರರನ್ನು ತಡೆದು ಪ್ರತಿಭಟನೆ ಹಿಂಪಡೆಯಬೇಕು ಇಲ್ಲದಿದ್ದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಅದನ್ನು ಲೆಕ್ಕಿಸದೇ ರಸ್ತೆ ಉಳುಮೆ ಮಾಡುತ್ತಿದ್ದ ಎರಡು ಎತ್ತುಗಳನ್ನು ಪೊಲೀಸರು ವಶಪಡಿಸಿಕೊಂಡರು.

ADVERTISEMENT

ಜೆಡಿಎಸ್‌ ಮುಖಂಡ ಅಗಿಲೇ ಯೋಗೇಶ್‌ ಸೇರಿದಂತೆ 8 ಜನರ ವಿರುದ್ಧ ನಗರದ ಪೆನ್ಷನ್‌ ಮೊಹಲ್ಲಾಠಾಣೆಯಲ್ಲಿ ಐಪಿಸಿ ಕಲಂ 149 ಅಡಿ ಸುಮೊಟೊ ಕೇಸು ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.