ADVERTISEMENT

ಗಂಡಸಿ:ಪುಷ್ಪರವಿ ಶಾಲೆ ಆವರಣದಲ್ಲಿ ಆಹಾರ ಮೇಳ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 6:11 IST
Last Updated 6 ಡಿಸೆಂಬರ್ 2025, 6:11 IST
ಗಂಡಸಿ ಹ್ಯಾಂಡ್ ಪೋಸ್ಟ್‌ನ ಪುಷ್ಪರವಿ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ತಿಂಡಿ–ತಿನಿಸುಗಳ ವ್ಯಾಪಾರ ನಡೆಸಿದರು.
ಗಂಡಸಿ ಹ್ಯಾಂಡ್ ಪೋಸ್ಟ್‌ನ ಪುಷ್ಪರವಿ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ತಿಂಡಿ–ತಿನಿಸುಗಳ ವ್ಯಾಪಾರ ನಡೆಸಿದರು.    

ಗಂಡಸಿ: ಇಲ್ಲಿನ ಗಂಡಸಿ ಹ್ಯಾಂಡ್ ಪೋಸ್ಟ್ ಪುಷ್ಪರವಿ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಶುಕ್ರವಾರ ಆಹಾರ ಮೇಳ ಏರ್ಪಡಿಸಲಾಗಿತ್ತು.

ಮೇಳದಲ್ಲಿ ಶಾಲೆಯ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪೋಷಕರ ನೆರವಿನಿಂದ ತಮ್ಮ ಮನೆಗಳಿಂದ ನಾಟಿ ಕೋಳಿ ಸಾರು, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಕಬಾಬ್, ಮಟನ್ ಸಾರು, ರಾಗಿ ಮುದ್ದೆ, ಚಪಾತಿ, ಸಸ್ಯಾಹಾರಗಳಾದ ಒಬ್ಬಟ್ಟು, ಪೂರಿ– ಸಾಗು, ಮಸಾಲೆ ದೋಸೆ, ರೈಸ್ ಭಾತ್, ವಿವಿಧ ಬಗೆಯ ಬಜ್ಜಿಗಳನ್ನು ಸ್ವಸಹಾಯ ಪದ್ಧತಿಯ ರೀತಿಯಲ್ಲಿ ಗ್ರಾಹಕರಿಗೆ ಮತ್ತು ಐಟಿಐ ಕಾಲೇಜಿನ ವಿದ್ಯಾರ್ಥಿಗಳಿಗೆ ಉಣಬಡಿಸಿದ್ದು ವಿಶೇಷವಾಗಿತ್ತು.

ಆಹಾರ ಮೇಳ ಉದ್ಘಾಟಿಸಿದ ಪುಷ್ಪರವಿ ಐಟಿಐ ಪ್ರಾಂಶುಪಾಲ ರೇವಣ್ಣ ಗೌಡ ಮಾತನಾಡಿ,  ಶಿಕ್ಷಣ ಸಂಸ್ಥೆಗಳಲ್ಲಿ ಈ ರೀತಿಯ ಆಹಾರ ಮೇಳ ಏರ್ಪಡಿಸುವುದರಿಂದ ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಾಗಲಿದೆ ಎಂದರು.

ADVERTISEMENT

ಶಾಲಾ ಮುಖ್ಯ ಶಿಕ್ಷಕಿ ಗೀತಾ, ಐಟಿಐ ಕಾಲೇಜಿನ ಉಪನ್ಯಾಸಕರಾದ ಚಂದ್ರೇಗೌಡ, ಫಯಾಜ್ ಮತ್ತು ಶಿಕ್ಷಕರು, ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.