ಹಿರೀಸಾವೆ: ಮೊಸಳೆ ಹೊಸಹಳ್ಳಿಯ ಗಣೇಶ ಮೆರವಣಿಗೆಯಲ್ಲಿ ಗಾಯಗೊಂಡು, ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವವರು ಪೋಷಕರು ಹಣ ಕಟ್ಟಲು ಪರದಾಡುತ್ತಿದ್ದಾರೆ. ಮುಖ್ಯಮಂತ್ರಿ ಮಾನವೀಯತೆಯಿಂದ ಸಹಾಯ ಮಾಡಬೇಕು ಎಂದು ಮನವಿ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಮಂಗಳವಾರ ಇಲ್ಲಿನ ಕಾಲೇಜು ರಸ್ತೆಯಲ್ಲಿ ಭಗತ್ ಸಿಂಗ್ ಬಾಯ್ಸ್ ಅವರ ಗೌರಿ ಗಣೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ಮೂಲಕ ಮನವೀಯತೆ ಪ್ರದರ್ಶನ ಮಾಡಬೇಕು ಎಂದರು.
ಕಸುಬು, ವೃತ್ತಿ ಆಧಾರದಲ್ಲಿ ಜಾತಿ ಹುಟ್ಟಿದ್ದು. ಜಾತಿಗೆ ಮುಂಚೆ ಇದ್ದಿದ್ದು ವರ್ಣಾಶ್ರಮ. ಹಿಂದೂ ಸಮಾಜವನ್ನು ದುರ್ಬಲಗೊಳಿಸುವ ಷಡ್ಯಂತ್ರ ನಡೆದಿದೆ. ಈ ಬಗ್ಗೆ ನಾವುಗಳು ಒಟ್ಟಾಗದಿದ್ದರೆ, ದೇಶ, ಧರ್ಮ ಮತ್ತು ನಾವು ಉಳಿಯುವುದಿಲ್ಲ ಎಂದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ್, ಮುಖಂಡ ಚಿದಾನಂದ್, ಹರ್ಷ, ಎಚ್.ಆರ್. ಬಾಲಕೃಷ್ಣ ಮತ್ತು ಹಿರೀಸಾವೆ ಭಗತ್ ಸಿಂಗ್ ಬಾಯ್ಸ್ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.