ADVERTISEMENT

ಹಳೇಬೀಡು: ಕಲ್ಲಿನಲ್ಲಿ ಅರಳಿದ ಗಣೇಶ ಮೂರ್ತಿಗಳು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2021, 5:44 IST
Last Updated 10 ಸೆಪ್ಟೆಂಬರ್ 2021, 5:44 IST
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದ ಹಿಂಭಾಗದ ಬಾಗಿಲಿನ ಪಕ್ಕದಲ್ಲಿ ಕಂಡು ಬರುವ ಇಲಿಯ ಮೇಲೆ ನಾಟ್ಯ ಮಾಡುತ್ತಿರುವ ಗಣೇಶ ಮೂರ್ತಿ (ಎಡಚಿತ್ರ). ಕಮಲದ ಮೇಲೆ ನಾಟ್ಯ ಮಾಡುತ್ತಿರುವ ಗಣೇಶ (ಮಧ್ಯ). ದಕ್ಷಿಣ ದ್ವಾರದಲ್ಲಿರುವ 15 ಅಡಿ ಎತ್ತರ ಗಣೇಶ ಮೂರ್ತಿ ಚಿತ್ರಗಳು: ಎಚ್.ಎಸ್.ಅನಿಲ್ ಕುಮಾರ್

ಹಳೇಬೀಡು: ಸೂಕ್ಷ್ಮ ಕುಸುರಿ ಕೆತ್ತನೆಯ ಶಿಲ್ಪಕಲೆಯೊಂದಿಗೆ ಭಾರತೀಯ ಸಂಸ್ಕೃತಿ ಹಾಗೂ ಧಾರ್ಮಿಕ ಪ್ರಜ್ಞೆಯನ್ನು ಹೊಯ್ಸಳರು ಎತ್ತಿ ಹಿಡಿದಿದ್ದಾರೆ.

ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ಪುರಾಣ ಪುಣ್ಯ ಕಥೆಗಳ ಆಕರ್ಷಕ ವಿಗ್ರಹದೊಂದಿಗೆ ಗಣೇಶ ಮೂರ್ತಿಗಳು ಚಿತ್ತಾಕರ್ಷಕವಾಗಿವೆ. ಇಲಿಯ ಮೇಲೆ ನಾಟ್ಯವಾಡುವ ಗಣಪ, ಕಮಲದ ಮೇಲೆ ನಾಟ್ಯ ಮಾಡುವ ಗಣೇಶನ ವಿಗ್ರಹಗಳು ಭಕ್ತರನ್ನು ಸೆಳೆಯುತ್ತವೆ.

ಪ್ರವೇಶ ದ್ವಾರದ ಪಕ್ಕದಲ್ಲಿರುವ ಎಡಮುರಿ ಗಣೇಶ ದೇವಾಲಯ ಪ್ರವೇಶಿಸಿದಾಕ್ಷಣ ಭಕ್ತರಿಗೆ ದರ್ಶನ ನೀಡುತ್ತಾನೆ.

ADVERTISEMENT

ದಕ್ಷಿಣ ದ್ವಾರದ ಹೊಯ್ಸಳ ಲಾಂಛನ ಎದುರಿನಲ್ಲಿರುವ 15 ಅಡಿ ಎತ್ತರದ ಗಣೇಶನನ್ನು ನೋಡಿದಾಗ ಮನಸ್ಸು ಪ್ರಫುಲ್ಲವಾಗುತ್ತದೆ.

ಶಿಲ್ಪಿಗಳ ಕೈಚಳಕದಿಂದ ಮೂಡಿರುವ ವಿಗ್ರಹಗಳು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಗಣೇಶ ಹಬ್ಬದಂದು ಹೊಯ್ಸಳೇಶ್ವರ ದೇಗುಲದ ನಕ್ಷತ್ರಾಕಾರದ ಜಗುಲಿಯಲ್ಲಿ ಒಂದು ಸುತ್ತು ಸಾಗಿದರೆ ವಿವಿಧ ಭಂಗಿಯ ಗಣೇಶ ಮೂರ್ತಿಗಳ ದರ್ಶನವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.