ಬಂಧನ
(ಸಾಂದರ್ಭಿಕ ಚಿತ್ರ)
ಹೊಳೆನರಸೀಪುರ: ಪಟ್ಟಣದ ಹಾಸನ– ಮೈಸೂರು ರಸ್ತೆಯ ಹೇಮಾವತಿ ಸೇತುವೆ ಮೇಲೆ ನಿಂತಿದ್ದ ಸಿಫ್ಟ್ ಡಿಸೈರ್ ಟ್ಯಾಕ್ಸಿ ಬಳಿ ಇಬ್ಬರು ಯುವಕರು ಅನುಮಾನಾಸ್ಪದವಾಗಿ ಸುತ್ತಾಡುತ್ತಿದ್ದ ಬಗ್ಗೆ ಮಾಹಿತಿ ಬಂದಾಗ ದಾಳಿ ನಡೆಸಿದ ಪೊಲೀಸರು ಗಾಂಜಾ ಹಾಗೂ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಪಟ್ಟಣದ ಈಡಿಗರ ಬೀದಿಯ ಸಂತೋಷ್ ಹಾಗೂ ಮುಸ್ಲಿಂ ಬಡಾವಣೆ ಶಹಬಾದ್ ಹುಸೇನ್ ಅವರನ್ನು ವಶಕ್ಕೆ ಪಡೆದು ಕಾರಿನಲ್ಲಿದ್ದ ಸುಮಾರು ಐದೂವರೆ ಲಕ್ಷ ಮೌಲ್ಯದ 27 ಕೆ.ಜಿ. ಗಾಂಜಾ ಹಾಗೂ ಗಾಂಜಾ ಸಾಗಾಣೆಗೆ ಬಳಸಿದ್ದ ಕಾರನ್ನು ವಶಕ್ಕೆ ಪಡೆದಿದ್ದಾರೆ.
ಹೊಳೆನರಸೀಪುರ, ಕೆ.ಆರ್.ಪೇಟೆ, ಕೆ.ಆರ್.ನಗರ, ಹಾಸನ ನಗರದಲ್ಲಿ ಗಾಂಜಾ ಮಾರಾಟ ಮಾಡಲು ಹೊಂಚು ಹಾಕಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.