ADVERTISEMENT

ಹಾಸನ: ವಕ್ಫ್ ತಿದ್ದುಪಡಿ ಕಾಯ್ದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:32 IST
Last Updated 25 ಜುಲೈ 2025, 2:32 IST
ಹಾಸನದಲ್ಲಿ ಗುರುವಾರ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್‌ ಪ್ರತಿನಿಧಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು
ಹಾಸನದಲ್ಲಿ ಗುರುವಾರ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್‌ ಪ್ರತಿನಿಧಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು   

ಹಾಸನ: ವಕ್ಫ್ ತಿದ್ದುಪಡಿ ಕಾಯ್ದೆ ‘ಉಮೀದ್ ಆಕ್ಟ್ –2025’ ವಿರೋಧಿಸಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಪ್ರತಿನಿಧಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಶಾಂತಲಾ ಅವರಿಗೆ ಮನವಿ ಸಲ್ಲಿಸಿದರು.

ವಕ್ಫ್ ಆಸ್ತಿಗಳ ಮೇಲೆ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮುದಾಯದ ಸ್ವಾಯತ್ತತೆ ಹಕ್ಕನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ. ಸಮುದಾಯದಿಂದ ಆಯ್ಕೆಯಾಗುವ ಮುತವಲ್ಲಿಯವರ ಬದಲಿಗೆ ಸರ್ಕಾರದಿಂದ ಪೂರ್ಣಕಾಲಿಕ ಮುಖ್ಯ ಕಾರ್ಯನಿರ್ವಾಹಕರ ನೇಮಕ, ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ಪ್ರಸ್ತಾವ, ಮಸೀದಿಗಳು, ಶಾಲೆಗಳು, ಆಸ್ಪತ್ರೆಗಳು ಮುಂತಾದ ಪವಿತ್ರ ಧಾರ್ಮಿಕ ಆಸ್ತಿಗಳ ಮೇಲಿನ ಬೆಂಬಲ ಹಿಂತೆಗೆತ, ಬಳಕೆ ಆಧಾರಿತ ವಕ್ಫ್ ರದ್ದತಿ ಮತ್ತು ಇತರ ತಿದ್ದುಪಡಿಗಳನ್ನು ವಿರೋಧಿಸಿದರು.

ಅಂಗೀಕೃತವಾದ ಕಾಯ್ದೆ ಸಂವಿಧಾನದ ವಿಧಿ 14, 25, 26 ಮತ್ತು 29ರ ಉಲ್ಲಂಘನೆಯಾಗಿದ್ದು, ಸರ್ಕಾರದ ಹಸ್ತಕ್ಷೇಪ ಹೆಚ್ಚಿಸುವ ಮೂಲಕ ವಕ್ಫ್ ಆಸ್ತಿಗಳ ಅತಿಕ್ರಮಣಕ್ಕೆ ದಾರಿ ಮಾಡಿಕೊಡುತ್ತದೆ. ಸಮುದಾಯದ ಸಲಹೆ ಇಲ್ಲದೇ ಈ ಕಾಯ್ದೆಯನ್ನು ಜಾರಿಗೆ ತರಬಾರದು ಎಂಬ ಆಗ್ರಹಿಸಿದರು.

ADVERTISEMENT

ಹಾಸನ ಜಿಲ್ಲೆಯ ದಾಖಲಾಗದ ವಕ್ಫ್ ಆಸ್ತಿಗಳನ್ನು ಸಮರ್ಪಕವಾಗಿ ಪರಿಶೀಲಿಸಿ ನೋಂದಾಯಿಸಲು ಕ್ರಮ ಕೈಗೊಳ್ಳಬೇಕು. ಮುಸ್ಲಿಮರಿಂದ ಸ್ವತಂತ್ರವಾಗಿ ನಿರ್ವಹಿಸಲಾಗುವ ವಕ್ಫ್ ಮಂಡಳಿಗಳಿಗೆ ಬೆಂಬಲ ನೀಡಲು ಪರ್ಯಾಯ ಯೋಜನೆ ತರಬೇಕು. ಎಲ್ಲ ಅತಿಕ್ರಮಣ ತೆರವುಗೊಳಿಸಲು, ಸೂಕ್ತ ಬಾಡಿಗೆ ವ್ಯವಸ್ಥೆ ಖಚಿತಪಡಿಸಿಕೊಳ್ಳಲು, ಆರ್ಥಿಕ ಅಭಿವೃದ್ಧಿಗೆ ಉಪಯೋಗಿಸುವ ಮೂಲಕ ರಾಷ್ಟ್ರದ ಹಿತಾಸಕ್ತಿಗೆ ಯೋಜನೆ ರೂಪಿಸಬೇಕು ಎಂದು ಮನವಿ ಮಾಡಿದರು.

ರಾಜ್ಯ ಘಟಕದ ಅಧ್ಯಕ್ಷೆ ನವಿದಾ ಹುಸೇನ್ ಅಸದಿ, ಜಿಲ್ಲಾ ಘಟಕದ ಅಧ್ಯಕ್ಷೆ ಅಯೇಷಾ ಆಫ್ರೀನ್, ನಯೇಲಾ ಅಸರ್, ಕಾರ್ಯದರ್ಶಿ ಹಜಿರಾ ಕುಲ್ಸೂಮ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.