ADVERTISEMENT

ದೇವೇಗೌಡರಿಗೆ ಭಾರತ ರತ್ನ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 12:45 IST
Last Updated 3 ಜೂನ್ 2021, 12:45 IST
ರಘು ಹೊಂಗೆರೆ
ರಘು ಹೊಂಗೆರೆ   

ಹಾಸನ: ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ಹಾಗೂ ಪ್ರಧಾನಿಯಾಗಿ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ಎಚ್.ಡಿ.ದೇವೇಗೌಡರಿಗೆ ಭಾರತ ರತ್ನ ಗೌರವ ನೀಡಬೇಕು ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿ ತಮ್ಮ 6 ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಮಣ್ಣಿನ ಮಕ್ಕಳ ಪರ ದನಿ ಎತ್ತುತ್ತಾ ಸದನಗಳ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡುತ್ತಿದ್ದಾರೆ.11 ತಿಂಗಳು ಪ್ರಧಾನ ಮಂತ್ರಿಯಾಗಿ, 16 ತಿಂಗಳುರಾಜ್ಯದಮುಖ್ಯಮಂತ್ರಿಯಾಗಿ ಮಾದರಿ ಆಡಳಿತ ನೀಡಿದ್ದರು. ರಸಗೊಬ್ಬರದ ಮೇಲಿನ ಸಬ್ಸಿಡಿ ಬಿಡುಗಡೆ ಮಾಡಿ ರೈತರ ನೆರವಿಗೆ ನಿಂತರು. ಅಷ್ಟೇ ಅಲ್ಲದೇ ನಾಲ್ಕು ಬಾರಿ ರಾಷ್ಟ್ರೀಯ ಅಭಿವೃದ್ಧಿ ಸಮಿತಿ ಸಭೆ ನಡೆಸಿ, ಆಯಾ ರಾಜ್ಯಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಗೈಗೊಂಡರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.‌

ಆಯಾಯ ರಾಜ್ಯಗಳ ವಿದ್ಯುತ್ ಸಮಸ್ಯೆಗಳನ್ನು ಕೇಂದ್ರದ ಅನುಮತಿ ಇಲ್ಲದೆ ಅಲ್ಲಿಯೇ ಉತ್ತಾದಿಸಿ ಬಳಸಿಕೊಳ್ಳಲು ಅನುಮತಿ ನೀಡುವ ಮೂಲಕ ಹಲವು ದಿನಗಳ ಸಮಸ್ಯೆ ನಿವಾರಿಸಿದರು. ಈಶಾನ್ಯ ರಾಜ್ಯಗಳ ಜ್ವಲಂತೆ ಸಮಸ್ಯೆ, ಕಾಶ್ಮೀರ ಸಮಸ್ಯೆ, ದೆಹಲಿಯಲ್ಲಿ ಮೆಟ್ರೋ ರೈಲ್ವೆ ಯೋಜನೆ, ಪಡಿತರ ವಿತರಣೆ, ಮಹಿಳಾ ಮೀಸಲಾತಿ ಸೇರಿದಂತೆ ಹಲವಾರು ಯೋಜನೆ ಜಾರಿಗೆ ತಂದಿದ್ದಾರೆ.

ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿಗೆ ಕುಡಿಯಲು ಕಾವೇರಿ ನೀರು, ಐ.ಟಿ ಪಾರ್ಕ್ ಗಳು, ಬಡವರಿಗೆ ಪಡಿತರ ಅನ್ನ ಭಾಗ್ಯ ಯೋಜನೆ , ಈದ್ಗಾ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಶಾಂತಿ ಸಾಮರಸ್ಯ ನಿರ್ಮಾಣಕ್ಕೆ ನಾಂದಿ ಹಾಡಿದರು.ಅಧಿಕಾರದ ಉಳಿವಿಗಾಗಿ ತಾವು ನಂಬಿರುವ ತತ್ವ-ಸಿದ್ಧಾಂತಗಳಿಗೆ ಎಂದೂ ತಿಲಾಂಜಲಿ ಹೇಳದೆ ಮೌಲ್ಯಾಧಾರಿತ ರಾಜಕಾರಣ ಮಾಡಿರುವ ದೇವೇಗೌಡರಿಗೆ ಭಾರತ ರತ್ನ ನೀಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸ್ಸು ಪತ್ರ ಕಳುಹಿಸಿಬೇಕೆಂದು ರಘು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.