
ಪ್ರಜಾವಾಣಿ ವಾರ್ತೆ
ಹಾಸನ: ಹಾಸನಾಂಬ ಜಾತ್ರೆಯ ಅಂಗವಾಗಿ ಬೂವನಹಳ್ಳಿ ವಿಮಾನ ನಿಲ್ದಾಣದ ಬಳಿ ಆಯೋಜಿಸಿರುವ ಪ್ಯಾರಾಗ್ಲೈಡಿಂಗ್‌ನಲ್ಲಿ 76 ವರ್ಷ ವಯಸ್ಸಿನ ಅಜ್ಜಿ ಭಾಗವಹಿಸಿ ಗಮನಸೆಳೆದರು.
ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಬೆಂಗಳೂರಿನ ಅಜ್ಜಿ, ಉತ್ಸವದ ಅಂಗವಾಗಿ ನಡೆಯುತ್ತಿರುವ ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್ ಸ್ಥಳಕ್ಕೆ ಬಂದಿದ್ದರು. ತಾವೂ ಪ್ಯಾರಾಗ್ಲೈಡಿಂಗ್ ಮಾಡುವ ಆಸೆ ಹೊರ ಹಾಕಿದ ಅವರ ಉತ್ಸಾಹವನ್ನು ಬೆಂಬಲಿಸಿದ ಕುಟುಂಬ ಸದಸ್ಯರು, ಪ್ಯಾರಾಗ್ಲೈಡಿಂಗ್‌ಗೆ ಅವಕಾಶ ಮಾಡಿಕೊಟ್ಟರು.
ಸುರಕ್ಷತಾ ಪರಿಕರಗಳನ್ನು ಕಟ್ಟಿಕೊಂಡು ಆಗಸದಲ್ಲಿ ಹಾರಾಟ ನಡೆಸಿ, ಸುರಕ್ಷಿತವಾಗಿ ಕೆಳಗೆ ಇಳಿಯುವ ಮೂಲಕ ಅಜ್ಜಿ ಹೊಸ ಸಾಹಸ ಮೆರೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.