ADVERTISEMENT

ಶ್ರವಣಬೆಳಗೊಳ| 37 ಆರೋಗ್ಯ ಸೇವಾ ಘಟಕ ಮಂಜೂರು: ಶಾಸಕ ಸಿ.ಎನ್.ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 4:48 IST
Last Updated 15 ಫೆಬ್ರುವರಿ 2026, 4:48 IST
ಶ್ರವಣಬೆಳಗೊಳದ ಜಿನನಾಥಪುರ ರಸ್ತೆಯ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಆಯುಷ್ಮಾನ್ ಆರೋಗ್ಯ ಸೇವಾ ಘಟಕದ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.ಡಾ. ಅರುಣ್ ಕುಮಾರ್ ಟಿ.ಜಿ, ಅಶೋಕ್ ಪಾಲ್ಗೊಂಡಿದ್ದರು
ಶ್ರವಣಬೆಳಗೊಳದ ಜಿನನಾಥಪುರ ರಸ್ತೆಯ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಆಯುಷ್ಮಾನ್ ಆರೋಗ್ಯ ಸೇವಾ ಘಟಕದ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು.ಡಾ. ಅರುಣ್ ಕುಮಾರ್ ಟಿ.ಜಿ, ಅಶೋಕ್ ಪಾಲ್ಗೊಂಡಿದ್ದರು   

ಶ್ರವಣಬೆಳಗೊಳ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯಡಿಯcಲ್ಲಿ 37 ಆರೋಗ್ಯ ಸೇವಾ ನೂತನ ಘಟಕಗಳನ್ನು ಪ್ರಾರಂಭಿಸಲು ಮಂಜೂರಾತಿ ನೀಡಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಶನಿವಾರ ಹೇಳಿದರು.

ಇಲ್ಲಿಯ ಮಾರುತಿ ಸರ್ಕಲ್ ಬಳಿಯ ಜಿನನಾಥಪುರ ರಸ್ತೆಯ ವ್ಯಾಪ್ತಿಯಲ್ಲಿ ಬರುವ ನೂತನ ಆರೋಗ್ಯ ಸೇವಾ ಘಟಕ ನಿರ್ಮಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಆಯುಷ್ಮಾನ್ ಸ್ವಾಸ್ಥ್ಯ ಯೋಜನೆಯ ವ್ಯಾಪ್ತಿಗೆ 15ನೇ ಹಣಕಾಸು ನಿಧಿಯಿಂದ ಪ್ರತಿಯೊಂದೂ ಸುಸಜ್ಜಿತ ಕಟ್ಟಡ ನಿರ್ಮಿಸುವ ಕಾಮಗಾರಿಗೆ ₹65 ಲಕ್ಷ ಅಂದಾಜು ವೆಚ್ಚ ತಗಲುತ್ತದೆ ಎಂದರು.

ಗ್ರಾಮೀಣ ಪ್ರದೇಶದ ಜನರಿಗೆ ತೊಂದರೆಯಾಗಬಾರದೆಂಬ ಸದುದ್ದೇಶದಿಂದ ಸೇವಾ ಆರೋಗ್ಯ ಘಟಕಗಳನ್ನು ತೆರೆಯುತ್ತಿದ್ದು, ಅದರಲ್ಲಿ ಹಿರಿಯ, ಮಹಿಳಾ ಆರೋಗ್ಯ ಸಹಾಯಕರ ವಸತಿ ಗೃಹವೂ ಒಳ ಪಟ್ಟಿರುವುದರಿಂದ ಸದಾ ಸೇವಾ ಸೌಲಭ್ಯ ದೊರೆಯಲಿದ್ದು, ಅದರ ಸದುಪಯೋಗ ಪಡೆದುಕೊಳ್ಳಲು ಈ ಭಾಗದ ಜನತೆ ಮುಂದಾಗಬೇಕೆಂದರು.

ADVERTISEMENT

ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಅರುಣ್ ಕುಮಾರ್ ಟಿ.ಜಿ.ಮಾತನಾಡಿ, ಉತ್ತಮ ಆರೋಗ್ಯ ಸೇವೆ ಒದಗಿಸಲು ಸರ್ಕಾರದ ಸಂಕಲ್ಪದಂತೆ ವ್ಯವಸ್ಥಿತವಾಗಿ ಈ ಘಟಕವು ಸಜ್ಜುಗೊಳ್ಳುತ್ತಿದೆ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಶೋಕ, ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ, ಜಯರಾಂ, ಮುಖಂಡರಾದ ಎಸ್.ಆರ್.ಲೋಕೇಶ್, ಎಸ್.ಎಂ.ಲಕ್ಷ್ಮಣ್, ಪ್ರಭಾಕರ್, ಪಾಲಾಕ್ಷ, ಮಂಜು, ಎಂಜಿನಿಯರ್ ಪುಟ್ಟಸ್ವಾಮಿ, ಆರೋಗ್ಯ ಇಲಾಖೆಯ ಕುಲಕರ್ಣಿ, ಅಚಲ, ಅಕ್ಷತಾ ಗುತ್ತಿಗೆದಾರ ಹರೀಶ್ ಸಂದೀಪ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.